ಒಂದು ಕಾಲದಲ್ಲಿ ಸಿನಿಮಾಗಳ ವಿಲನ್ ಎಂದರೆ ದೊಡ್ಡ ಮೀಸೆ, ಕೆನ್ನೆಯ ಮೇಲೆ ಎರಡು ಇರಿತದ ಗಾಯ ಮತ್ತು ಬೃಹತ್ ದೇಹ ಹೊಂದಿರುವ ಗಂಭೀರ ವ್ಯಕ್ತಿಯಾಗಿ ಇರುತ್ತಿದ್ದರು.
ಅವರ ಪಾತ್ರದ ಬಗ್ಗೆ ಹೆಚ್ಚಿನ ಗೌರವವೂ ಇರಲಿಲ್ಲ. ಆದರೆ ಈಗಿನ ಖಳನಾಯಕರಿಗೆ ನಾಯಕನಿಗೆ ಸಮಾನ ಗೌರವ ಸಿಗುತ್ತಿದೆ.
ಕಳೆದ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಪುಷ್ಪದಲ್ಲಿ ಫಸ್ಟ್ ಆಫ್ ನಲ್ಲಿ ಹೀರೋ ಅಬ್ಬರ ಜೋರಾಗಿತ್ತು.
ಆದ್ರೆ ಸೆಕೆಂಡ್ ಆಫ್ ನಲ್ಲಿ ಫಹಾದ್ ಫಜಿಲ್ ಎಂಟ್ರಿ ಕೊಟ್ಟ ನಂತರ ಪುಷ್ಪ ಸ್ಪೀಡ್ ಗೆ ಬ್ರೇಕ್ ಬೀಳುತ್ತದೆ.
ಇಲ್ಲಿ ವಿಲನ್ ಫಹದ್, ಪುಷ್ಪಾ ಬಳಿ ರೆಸ್ಪೆಕ್ಟ್ ಕೇಳುತ್ತಾರೆ. ಇಲ್ಲಿಂದ ಥಗ್ ವಾರ್ ಶುರುವಾಗುತ್ತದೆ.
ಇದಾದ ನಂತರ ಇತ್ತೀಚೆಗೆ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಮಲ್ ಹಸನ್ ವಿಕ್ರಂ ಸಿನಿಮಾದಲ್ಲಿ ಸೂರ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಸೂರ್ಯ ಎಂಟ್ರಿ ಕೊಡುತ್ತಾರೆ. ರೋಲೆಕ್ಸ್ ಕ್ಯಾರಕ್ಟರ್ ನಲ್ಲಿ ಸೂರ್ಯ ಮಾಸ್ ಎಂಟ್ರಿ ಮಾಸ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೀರೋಗಳು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಹೊಸ ಕಂಡೀಷನ್ ಅಪ್ಲೇ ಮಾಡಲಾಗುತ್ತಿದೆ.
ಹೀರೋ ಕೈಯಲ್ಲಿ ಹೊಡೆಸಿಕೊಂಡರೂ ಸಹ ರೆಸ್ಪೆಕ್ಟ್ ಕಡಿಮೆಯಾಗಬಾರದು ಅಂತಾ ಪಟ್ಟು ಹಿಡಿಯುತ್ತಿದ್ದಾರಂತೆ.