ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ನಿನ್ನೆಯಷ್ಟೆ 48 ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ವಿಜಯ್ ಜನ್ಮದಿನದ ಪ್ರಯುಕ್ತ ಅವರ ಮುಂಬರುವ ಹೊಸ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿದ್ದು, ಚಿತ್ರಕ್ಕೆ ವಾರಿಸು ಎಂದು ಹೆಸರಿಡಲಾಗಿದೆ.
ಈ ಕುರಿತು ಚಿತ್ರದ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ವಿಜಯ್ ಅವರ 66 ನೇ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದಾರೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ ಚಿತ್ರತಂಡ.
ಇದರ ಜೊತೆಗೆ ವಿಜಯ್ ಅಭಿಮಾನಿಗಳಿಗೆ ಇನ್ನೊಂದು ಸಹಿ ಸುದ್ದಿ ಸಿಕ್ಕಿದೆ. IPL ನ ಚೈನೈ ಸೂಪರ್ ಕಿಂಗ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಲುತ್ತಿದ್ದು, ಮೊದಲ ಭಾರಿಗೆ ದಳಪತಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ನ್ಯೂಸ್ ಹರಿದಾಡುತ್ತಿದೆ.
ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಧೋನಿ ಸಿನಿಮಾ ರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಮೂಲಕವೇ ಧೋನಿ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿ ಆಗುತ್ತಿದೆ. ತಾರಾ ಬಳಗ ಖಚಿತವಾದ ನಂತರ ಸ್ವತಃ ಧೋನಿಯೇ ಈ ವಿಷಯವನ್ನ ಮಾದ್ಯಮಗಳ ಮುಂದೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.