ಕರಣ್ ಮಲ್ಹೋತ್ರಾ ನಿರ್ದೇಶನದ ಶಂಶೇರಾ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸುತ್ತಿದ್ದ ರಣಬೀರ್ ಕಾರಿಗೆ ಅಪಘಾತವಾಗಿದೆ.
ಆದರೆ, ಅಪಘಾತದಲ್ಲಿ ನಾಯಕನಿಗೆ ಯಾವುದೇ ಗಾಯಗಳಾಗಿಲ್ಲ, ಶಂಶೇರಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಣಬೀರ್ ತಮ್ಮ ಕಾರು ಅಪಘಾತಕ್ಕೀಡಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಜ ಹೇಳಬೇಕಾದರೆ ನಾನು ಕರೆಕ್ಟ್ ಸಮಯಕ್ಕೆ ಮನೆ ಬಿಟ್ಟಿದ್ದೆ. ಆದ್ರೆ ದಾರಿಯಲ್ಲಿ ಕಾರಿಗೆ ಆಕ್ಸಿಡೆಂಟ್ ಆಯ್ತು.
ಕಾರಿನ ಗ್ಲಾಸ್ ಹೊಡೆದು ಹೋಗಿವೆ. ಆದ್ರೆ ನಮಗೆ ಯಾವುದೇ ತೊಂದರೆ, ಗಾಯಗಳಾಗಿಲ್ಲ.
ಇನ್ನು ನಾನು ಸಂಜಯ್ ದತ್ ಅವರ ದೊಡ್ಡ ಅಭಿಮಾನಿ.
ನಾವು ಜೊತೆಯಾಗಿ ನಟಿಸಿದ ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ರಂಜಿಸುತ್ತದೆ ಎಂದು ರಣಬೀರ್ ಹೇಳಿದ್ದಾರೆ.
ಶಂಶೇರಾ ಸಿನಿಮಾ ಜುಲೈ 22ಕ್ಕೆ ರಿಲೀಸ್ ಆಗಲಿದೆ.
ಆ ನಂತರ ರಣ್ ಬೀರ್, ಆಲಿಯಾ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟಂಬರ್ 9 ರಂದು ರಿಲೀಸ್ ಆಗಲಿದೆ.