ಇತ್ತೀಚೆಗಷ್ಟೇ ಬಾಲಿವುಡ್ ನ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರದ ಟ್ರೇಲರ್ ರಿಲೀಸ್ ಆಗಿದ್ದು , ಟ್ರೇಲರ್ ನೋಡಿರುವ ಫ್ಯಾನ್ಸ್ ಫಿದಾ ಆಗಿದ್ಧಾರೆ.. ಇದೊಂದು ಸೂಪರ್ ನ್ಯಾಚುರಲ್ , ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಗಿದ್ದು ಜನರಂತೂ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ..
ಸಿನಿಮಾದಲ್ಲಿ ರಣಬೀರ್ , ಆಲಿಯಾ , ಅಮಿತಾಬ್ , ಮೌನಿ ರಾಯ್ , ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಆದ್ರೆ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಟ್ರೇಲರ್ ಬಗ್ಗೆ ಸಾಕಷ್ಟು ನೆಟ್ಟಿಗರು ಕೆಂಡಕಾರಿದ್ದೂ ಉಂಟು..
ಯಾಕಂದ್ರೆ ಈ ಟ್ರೇಲರ್ ನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪ ಮಾಡಿದ್ರು.. ಕಾರಣ ದೇಗುಲದೊಳಗೆ ರಣಬೀರ್ ಶೂ ಧರಿಸಿದ್ದಾರೆ ಎಂದು ಟ್ರೇಲರ್ ನಲ್ಲಿ ಕೆಲವರು ಗುರುತಿಸಿದ್ದರು..
ಇತ್ತ ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಈ ಸಿನಿಮಾವನ್ನು ಓಂ ರೌತ್ ನಿರ್ದೇಶಿಸುತ್ತಿದ್ದು, ಸುಮಾರು 500 ಕೋಟಿ ಭಾರಿ ಬಜೆಟ್ ನಲ್ಲಿ ಸೆಟ್ಟೇರಿದೆ.
ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಗ್ರಾಫಿಕ್ಸ್ ವರ್ಕ್ ನಡೆಯುತ್ತಿದೆ.
ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ಆದ್ರೆ ಬ್ರಹ್ಮಾಸ್ತ್ರ ಟ್ರೈಲರ್ ನೋಡಿದ ಬಳಿಕ ಬಾಲಿಬಾಲಿವುಡ್ ಸಿನಿಮಾಗಳ ವಿಎಫ್ ಎಕ್ಸ್ ವರ್ಕ್ ಮೇಲೆ ಸಿನಿಪ್ರೇಮಿಗಳು ನಂಬಿಕೆ ಕಳೆದುಕೊಂಡಿದ್ದಾರೆ.
ವಿಎಫ್ ಎಕ್ಸ್ ತುಂಬಾ ಅಗ್ಗವಾಗಿದೆ ಎಂಬ ಕಾಮೆಂಟ್ ಗಳು ಬಂದಿವೆ.
ಆದಿಪುರುಷ ಸಿನಿಮಾ ವಿಎಫ್‌ಎಕ್ಸ್ ಮೇಲೆ ನಿಂತಿದೆ. ಏನೇ ವ್ಯತ್ಯಾಸವಾದರೂ ಪ್ರಭಾಸ್ ಇಮೇಜ್ ಹಾಳಾಗುತ್ತದೆ.
ಸಾಕಷ್ಟು ಟ್ರೋಲಿಂಗ್ ಎದುರಾಗುತ್ತದೆ. ಯಾಕೆಂದರೇ ಇತ್ತೀಚೆಗೆ ರಿಲೀಸ್ ಆದ ರಾಧೇಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಗ್ರಾಫಿಕ್ಸ್ ಅಬ್ಬಾ ಅನ್ನುವಂತೆ ಇರಲಿಲ್ಲ. ಹೀಗಾಗಿ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.