ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳು ಕರಾವಳಿ ಕ್ಯೂಟ್ ಬೆಡಗಿ ರಾಧಿಕಾ ರಾವ್ ಕಿರುತೆರೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.. ಕನ್ನಡ , ತುಳು ಇಂಡಸ್ಟ್ರಿಯಲ್ಲೂ ಮಿಂಚಿದ್ದಾರೆ.. ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಧಾರಾವಾಹಿಯ ಮೂಲಕವೇ ಇವರು ಸಾಕಷ್ಟು ಫೇಮ್ ಗಳಿಸಿದ್ರು ಅಂದ್ರೆ ತಪ್ಪಾಗಲ್ಲ..
ಈ ಚೆಲುವೆಯ ಬಗ್ಗೆ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳು ಎಷ್ಟೋ ಜನರಿಗೆ ತಿಳಿದಿಲ್ಲ..
ಅಂದ್ಹಾಗೆ ಇವರು ತುಳು ಸಿನಿಮಾ ಏಸಾದಲ್ಲಿ ಮೊದಲು ನಾಯಕಿಯಾಗಿ ಕಾಣಿಸಿಕಂಡರು.. ಆನಂತರ ಕನ್ನಡ ಇಂಡಸ್ಟ್ರಿಯಲ್ಲಿ ಸಕ್ರಿಯರಾದ್ರೂ..
ಮೂಲತಃ ಕರಾವಳಿಯವರೇ ಆದ್ರೂ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ರಾಜಗೋಪಾಲ ಮತ್ತು ತಾಯಿ ವಿಜಯ ಲಕ್ಷ್ಮಿ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ರಾಧಿಕ ಭರತನಾಟ್ಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು.
ಆರಂಭದಲ್ಲಿ ಇಂಡಸ್ಟ್ರಿಗೆ ಬರಲು ಸಾಕಷ್ಟು ಸ್ಟ್ರಗಲ್ ಮಾಡಿದ್ದಾರೆ ರಾಧಿಕಾ… ಅವಕಾಶ ಗಿಟ್ಟಿಸಿಕೊಳ್ಳಲು ಕೆಲವು ಆಡಿಷನ್ ಗೆ ಹೋಗಿ ಆರಂಭದಲ್ಲಿ ಕೆಲವು ಹಿನ್ನಡೆಗಳನ್ನೂ ಅನುಭವಿಸಿದ್ದರು. 17ನೆ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.. ರಾಧಿಕ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ನಲ್ಲಿ ಬಿಎಸ್ ಸಿ ಪದವಿ ಪಡೆದುಕೊಂಡರು.
ಬಳಿಕ 2018ರಲ್ಲಿ ಎರಡನೇ ತುಳು ಸಿನಿಮಾ ಪುದರ್ ಗೊಂಜಿ ಬುಡೆದಿ ನಲ್ಲಿ ಕಾಣಿಸಿಕೊಂಡರು..
ಇದಾದ ಬಳಿಕವೇ ಕನ್ನಡ ಕಿರುತೆರೆಗೆ ರಾಧಿಕಾ ಎಂಟ್ರಿ ಪಡೆದಿದ್ದು.. ಕನ್ನಡ ಧಾರಾವಹಿಯಲ್ಲಿ ನಟಿಸಲು ಆಡಿಷನ್ ಗೆ ಸಹ ತೆರಳಿದರು. ಹುಬ್ಬಳ್ಳಿ ಹುಡುಗ ಮಂಗಳೂರು ಹುಡುಗಿ ಧಾರಾವಾಹಿಯಲ್ಲಿ ಅಭಿನಯಿಸಿ ಚಿರಪರಿಚಿತರಾದರು..
ಆ ನಂತರ ತಮಿಳು ಕಿರುತೆರೆಗೆ ರಾಧಿಕಾ ಪಾದಾರ್ಪಣೆ ಮಾಡಿದ್ರು… ಪಾನ್ನುಕ್ಕು ತಂಗ ಮನಸು ಎಂಬ ಧಾರಾವಾಹಿಯಲ್ಲಿ ಅಭಿನಯಿಸಿ ತಮಿಳು ಕಿರುತೆರೆ ಅಭಿಮಾನಿಗಳ ಮನಸ್ಸನ್ನೂ ಗೆದ್ದಿದ್ದಾರೆ..
ಹುಬ್ಬಳ್ಳಿ ಹುಡುಗ ಮಂಗಳೂರು ಹುಡುಗಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವುದಕ್ಕೂ ಮುನ್ನ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು..
ಸ್ಯಾಂಡಲ್ ವುಡ್ ಗೂ ಅದೃಷ್ಟ ಪರೀಕ್ಷೆಗಿಳಿದಿದ್ದ ನಟಿ ‘ಲುಂಗಿ’ ಸಿನಿಮಾದಲ್ಲಿ ನಟಿಸಿದರು.. ಬಳಿಕ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು..