KGF 2 ಸಿನಿಮಾ ನಂತರ ಯಶ್ ಮುಂದಿನ ನಡೆ ಬಗ್ಗೆ ಎಲ್ಲರ ಕಣ್ಣಿದೆ.. KGF 3 ಬರುವ ಗುಮಾನಿಯೂ ಇದೆ.. ಆದ್ರೆ ಸಿನಿಮಾ ತಡವಾಗಬಹುದೆಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯಶ್ ಹೊಸ ಸಿನಿಮಾ ಶೀಘ್ರದಲ್ಲೇ ಮಾಡಲಿದ್ದಾರೆ..
ಅದ್ರಲ್ಲಿ ಪೂಜಾ ಹೆಗ್ಡೆ ನಾಯಕಿ.. ಹೀಗೆ ಸಾಕಷ್ಟು ವದಂತಿಗಳು ಹರಿದಾಡ್ತಿರೋ ಹೊತ್ತಲ್ಲೇ , ದಿಲ್ ರಾಜು ನಿರ್ಮಾಣದ ಸಿನಿಮಾದಲ್ಲಿ ಯಶ್ ನಟಿಸ್ತಿದ್ದು ಸಿನಿಮಾಗೆ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಈಗ ಸೌತ್ ಇಂಡಸ್ಟ್ರಿ ಅಷ್ಟೇ ಅಲ್ದೇ ಬಾಲಿವುಡ್ ನ ಶೇಕ್ ಮಾಡಿದೆ..
ಹೌದು..!! ಇಂಡಿಯಾದಲ್ಲಿ ಯಶ್ ಮೇನಿಯಾ ಹೇಗಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ.. KGF 2 ಸಿನಿಮಾ ಆದ ಮೇಲೆ ಯಶ್ ಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಾಗಿದ್ದಾರೆ…
ಇಂಡಿಯನ್ ಸ್ಟಾರ್ ಆಗಿ ಹಗೊರಹೊಮ್ಮಿರುವ ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ..
ತೆಲುಗು ನಿರ್ದೆಶಕನ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ. ಆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ದಿಲ್ ರಾಜು ನಿರ್ಮಾಣದ ಸಿನಿಮಾಕ್ಕಾಗಿ ಯಶ್, 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತುಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿವೆ.
ನಟ ಯಶ್ ಪ್ರಸ್ತುತ ನರ್ತನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಜೋರಾಗಿಯೇ ಸೌಂಡ್ ಮಾಡ್ತಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ..
ದಿಲ್ ರಾಜು ಕಳೆದ ಬಾರಿ ಆಚರಿಸಿಕೊಂಡ ಅದ್ಧೂರಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದರು. ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಸಹ ಇದ್ದರು. ಇನ್ನು ದಿಲ್ ರಾಜು ಅವರೇ ಆಂಧ್ರ ಹಾಗೂ ತೆಲಂಗಾಣದಲ್ಲಿ ಕೆಜಿಎಫ್ ಸಿನಿಮಾದ ವಿತರಣೆ ಸಹ ಮಾಡಿದ್ದರು.