ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಪ್ರಸ್ತುತ ಪಾನ್ ಇಂಡಿಯಾ ಹೀರೋಗಳ ಪೈಕಿ ಎಲ್ಲರಿಗಿಂತ ಮುಂದೆ ಇದ್ದಾರೆ.
ಬಾಹುಬಲಿ 2 ಪಾನ್ ಇಂಡಿಯಾ ಮಾರ್ಕೆಟ್ ಆಗಿ ಬಂದ ಸಾಹೋ, ರಾಧೆಶ್ಯಾಮ್ ಡಿಜಾಸ್ಟರ್ಸ್ ಆಗಿವೆ.
ಆದ್ರೂ ಕೂಡ ಪ್ರಭಾಸ್ ಇಮೇಜ್ ಮಾತ್ರ ಕಡಿಮೆ ಆಗಿಲ್ಲ.
ಅವರೊಂದಿಗೆ ಸಿನಿಮಾಗಳನ್ನು ಮಾಡಲು ಪಾನ್ ಇಂಡಿಯಾ ನಿರ್ದೇಶಕರು ಕ್ಯೂ ಕಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಭಾವನೆಯನ್ನ ಭಾರಿಯಾಗಿ ಹೆಚ್ಚಿಸಿಕೊಂಡಿದ್ದಾರಂತೆ ಪ್ರಭಾಸ್.
ಇಲ್ಲಿಯವರೆಗೂ 100 ಕೋಟಿ ರುಪಾಯಿ ಸಂಭಾವನೆ ಪಡೆಯುವ ಪ್ರಭಾಸ್, ಈಗ 20 ಕೋಟಿ ಹೆಚ್ಚಾಗಿ ಕೇಳುತ್ತಿದ್ದಾರಂತೆ.
ಅಂದ್ರೆ ಒಂದು ಸಿನಿಮಾಗೆ 120 ಕೋಟಿ ರುಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಅದೇ ನಿಜವಾದ್ರೆ ಆದಿಪುರುಷ್, ಸಲಾರ್, ಪ್ರಾಜೆಕ್ಟ್ ಗಾಗಿ ಪ್ರಭಾಸ್ ಅವರಿಗೆ 120 ಕೋಟಿ ಸಂಭಾವನೆ ನೀಡಬೇಕಾಗಿದೆ.
ಪಾನ್ ಇಂಡಿಯಾ ಮಾರ್ಕೆಟ್ ನಲ್ಲಿ ಸಿನಿಮಾ ಕ್ಲಿಕ್ ಆದ್ರೆ 1000 ಕೋಟಿ ಗ್ಯಾರೆಂಟಿ ಅನ್ನೋ ವಿಚಾರವನ್ನು ಆರ್ ಆರ್ ಆರ್, ಕೆಜಿಎಫ್ 2 ಸಿನಿಮಾ ಮಾಡಿ ತೋರಿಸಿದೆ.
ಆದಿಪುರುಷ್, ಸಲಾರ್ ಸಿನಿಮಾಗಳು ಹಿಟ್ ಟಾಕ್ ಪಡೆದುಕೊಂಡರೇ 1000 ಕೋಟಿ ಪಡೆಯೋದು ಪಕ್ಕಾ ಎಂದು ಹೇಳಲಾಗುತ್ತಿದೆ.