ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ.. ಈ ನಡುವೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದೀಗ ‘ಪುಷ್ಪ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ KGF 2 ಹವಾ…!!! ಎಲ್ರಿಗೂ ಗೊತ್ತಿದೆ..ಬಾಕ್ಸ್ ಆಫೀಸ್ ನಲ್ಲಿ ಯಾವ್ ರೇಂಜ್ ಗೆ ತೂಫಾನ್ ಎಬ್ಬಿಸಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ..
ಇದೀಗ KGF 2 ರೇಂಜ್ ಗೆ ಸದ್ದು ಮಾಡಬೇಕು , ಅದರ ರೆಕಾರ್ಡ್ ಮುರಿಯಲು ಪುಷ್ಪ 2 ಅದ್ಧೂರಿಯಾಗಿ ತಯಾರಾಗಬೇಕಿದೆ..
ಪುಷ್ಪಾ 2 ಸಿನಿಮಾ ಬಗ್ಗೆ ಸಾಕಷ್ಟು ಕ್ರೇಜ್ ಇದೆ.
ಅದಕ್ಕಾಗಿಯೇ ಲೇಟ್ ಆಗಿ ಬಂದ್ರೂ ಲೆಟೆಸ್ಟ್ ಆಗಿ ಬರಬೇಕು ಅಂತಾ ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ಈ ಹಿಂದೆ ಬಾಹುಬಲಿ, ಕೆಜಿಎಫ್ 2 ಸಿನಿಮಾಗಳಲ್ಲಿ ಇರುವಂತೆ ಹೀರೋ ವರ್ಸಸ್ ವಿಲನ್ ವಾರ್ ಅನ್ನ ನೆಕ್ಸ್ಟ್ ಲೆವೆಲ್ ನಲ್ಲಿ ತೋರಿಸಲು ಸುಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರೆ..
ಅಂದ್ಹಾಗೆ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿವೆ.. ಬಜೆಟ್ ಕೂಡ ಡಬಲ್ ಆಗಿದೆ.. ಸಿನಿಮಾದಲ್ಲಿ ರಶ್ಮಿಕಾ ಸಾಯೋ ಕ್ಲೈಮಾಕ್ಸ್ ಇದೆ ಹೀಗೆಲ್ಲಾ ಸುದ್ದಿ ಹರಿದಾಡ್ತಿದೆ..
ಈ ನಡುವೆ ರಶ್ಮಿಕಾ ಎದುರಿಗೆ ಇಂಗ್ಲಿಷ್ ನಟಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹಲ್ ಚಲ್ ಎಬ್ಬಿಸಿದೆ..
ಪುಷ್ಪ ಭಾಗವೊಂದರ ಕ್ಲೈಮ್ಯಾಕ್ಸ್ಲ್ಲಿ ಪುಷ್ಪ ರಾಜ್ , ಶ್ರೀವಲ್ಲಿಯನ್ನು ಮದುವೆಯಾಗುತ್ತಾರೆ.. ಮತ್ತೊಂದು ಕಡೆ, ಪೋಲಿಸ್ ಪಾತ್ರಧಾರಿ ಫಹಾದ್ ಫಾಸಿಲ್, ಪುಷ್ಪರಾಜ್ ಮಟ್ಟ ಹಾಕಲು ಹೊಂಚು ರೂಪಿಸುತ್ತಾನೆ. ಇಲ್ಲಿಂದ ಮುಂದುವರೆಯುವ ಪುಷ್ಪ 2 ಚಿತ್ರದಲ್ಲಿ ಹೆಚ್ಚಾಗಿ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆಯಂತೆ. ಹಾಗಾಗಿ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಎದುರು ಮತ್ತೊಬ್ಬ ಇಂಗ್ಲಿಷ್ ಹುಡುಗಿ ಇರಲಿದ್ದಾರಂತೆ.
ಪುಷ್ಪ ರಾಜ್ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರವನ್ನು ವಿಸ್ತರಿಸುತ್ತಾನೆ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತೊಬ್ಬ ನಟಿಯನ್ನು ಆರಿಸಲಾಗಿದೆ. ಹಾಗಾಗಿ ನಟ ಅಲ್ಲು ಅರ್ಜುನ್ ಜೊತೆಗೆ ಮತ್ತೊಬ್ಬ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ..