ಬಾಲಿವುಡ್ ನ ಪ್ರಮುಖ ನಿರ್ಮಾಪಕ ಕರಣ್ ಜೋಹರ್ ಶಾರುಖ್ ಖಾನ್ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ವದಂತಿಗಳು ತನಗೆ ತುಂಬಾ ನೋವುಂಟು ಮಾಡಿದೆ ಎಂದು ಕರಣ್ ತಮ್ಮ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ತನ್ನ ಅನ್ಸೂಟಬಲ್ ಬಾಯ್ ಪುಸ್ತಕದಲ್ಲಿ ಕರಣ್ ತನ್ನ ಮನಸ್ಸನ್ನು ತುಂಬಾ ನೋಯಿಸಿದ ವದಂತಿಗಳ ಬಗ್ಗೆ ಬರೆದುಕೊಂಡಿದ್ದಾರೆ.
ದೈಹಿಕ ಸಂಬಂಧ ಇಟ್ಟುಕೊಳ್ಳುವುದು ಅಂದರೇ ಅಷ್ಟು ಸುಲಭವಲ್ಲ. ಅದು ಯಾರ ವಿಷಯದಲ್ಲಾಗಿದ್ದರೂ ವ್ಯಕ್ತಿಗತವೇ ಆಗಿದೆ.
ನನ್ನ ದುರಾದೃಷ್ಟ ಏನಂದರೇ ನನಗೂ ಶಾರೂಕ್ ಗೂ ಸಂಬಂಧ ಕಲ್ಪಿಸಿದ್ದರು. ಈ ಸುದ್ದಿಯನ್ನು ಕೇಳಿ ನನಗೆ ತುಂಬಾ ಶಾಕ್ ಆಯ್ತು.
ಒಂದು ಬಾರಿ ಟಿವಿಯಲ್ಲಿ ಒಬ್ಬ ಆಂಕರ್ ನನ್ನ ಮುಖದ ಮೇಲೆ ಆ ಪ್ರಶ್ನೆಯನ್ನ ಕೇಳಿದ್ದರು.
ಇದರಿಂದ ನನಗೆ ತುಂಬಾ ಕೋಪ ಬಂದಿತ್ತು. ನೀನು ನಿನ್ನ ಅಣ್ಣನ ಜೊತೆ ಮಲಗುತ್ತೀಯಾ ಎಂದು ನಾನು ಪ್ರಶ್ನಿಸಿದೆ. ಅದಕ್ಕೆ ಆತ ಏನು..? ಏನ್ ಹೇಳಿದ್ರೀ ಎಂದು ಪ್ರಶ್ನಿಸಿದರು.
ಆ ಪ್ರಶ್ನೆ ಕೇಳಲು ನಿಮಗೇ ಹೇಗೆ ಸಾಧ್ಯ ಎಂದು ಆಕ್ರೋಶ ಹೊರಹಾಕಿದ್ದೆ.
ಎಷ್ಟು ವಿಮರ್ಶೆಗಳು ಬಂದರೂ ಎಷ್ಟು ಪುಕಾರುಗಳು ಬಂದರೂ ನಮ್ಮ ಮಧ್ಯೆ ಒಳ್ಳೆಯ ಅನುಬಂಧವಿದೆ.
ಶಾರೂಕ್ ನನಗೆ ತಂದೆ ಮತ್ತು ಅಣ್ಣನಂತೆ ಎಂದು ಕರಣ್ ಹೇಳಿದ್ದಾರೆ.