ಬಯೋಪಿಕ್ ಕಾ ಬಾಪ್ ಬಾಲಿವುಡ್ ನಲ್ಲಿ ಈಗಾಗಗಲೇ ಸಾಕಷ್ಟು ಬಯೋಪಿಕ್ ಗಳು ಬಂದಿವೆ.. ಇನ್ನೂ ಅನೇಕ ಬಯೋಪಿಕ್ ಗಳು ತೆರೆ ಮೇಲೆ ಬರೋದು ಬಾಕಿಯಿದೆ.. ಒಂದ್ ರೀತಿ ಬಯೋಪಿಕ್ ಮೇನಿಯಾ ಬಾಲಿವುಡ್ ನಲ್ಲಿ ಚಾಲೂ ಇದೆ..
ಇದೆಲ್ಲದರ ನಡುವೆ ಈಗ ಬಾಲಿವುಡ್ ನಲ್ಲಿ ಮತ್ತೊಂದು ಬಯೋಪಿಕ್ ಬರುತ್ತಿದೆ.. ಅದು ಮತ್ಯಾರದ್ದೂ ಅಲ್ಲ.. ಭಾರತದ ಧೀಮಂತ ರಾಜಕಾರಣಿ , ದೇಶ ಕಂಡ ಅಪ್ರತಿಮ ನಾಯಕ , ಅಜಾತ ಶತ್ರು ಅಟಲಲ್ ಬಿಹಾರಿ ವಾಜಪೇಯಿ ಅವರದ್ದು..
ಅವರದ್ದೇ ಜನಪ್ರಿಯ ಸಾಲುಗಳಾದ , “ ಮೇ ರಹೂ ಯಾ ನಾ ರಹೂ , ದೇಶ್ ರೆಹನಾ ಚಾಹಿಯೇ ಅಟಲ್ “ ಎಂಬ ಟೈಟಲ್ ನಲ್ಲಿ ಸಿನಿಮಾ ಮೂಡಿ ಬರಲಿದೆ.. ಅಂದ್ಹಾಗೆ ಈ ಸಿನಿಮಾ ‘ನರೇಂದ್ರ ಮೋದಿ’ ಬಯೋಪಿಕ್ ಖ್ಯಾತಿಯ ಸಂದೀಪ್ ಸಿಂಗ್ ಉಲ್ಲೇಖ್ ಮತ್ತು “ಜನ್ ಹಿತ್ ಮೇ ಜಾರಿ” ಖ್ಯಾತಿಯ ವಿನೋದ್ ಭಾನುಶಾಲಿ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ…
ಈ ಸಿನಿಮಾ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ , ಉಲ್ಲೇಖ್ N P ಅವರ ರಚನೆಯ ‘ ಅನ್ ಟೋಲ್ಡ್ ಅಟಲ್ : ಪೊಲಿಟೀಷಿಯನ್ ಅಂಡ್ ಪ್ಯಾರಡಾಕ್ಸ್ ‘ ಪುಸ್ತಕವನ್ನಾಧರಿಸಿದೆ..
ಅಟಲ್ ಬಯೋಪಿಕ್ ಬಗ್ಗೆ ನಿರ್ಮಾಪಕ ವಿನೋದ್ ಭಾನುಶಾಲಿ ಅವರು ಮಾತನಾಡಿದ್ದು , ನಾನು ಪಾಜಿಪೇಯಿ ಅವರ ದೊಡ್ಡ ಅಭಿಮಾನಿ. ಹುಟ್ಟು ನಾಯಕ, ಒಬ್ಬ ರಾಜನೀತಿಜ್ಞ ಸರ್ವಶ್ರೇಷ್ಠತೆ, ದಾರ್ಶನಿಕ. ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪ್ರತಿಮವಾಗಿದೆ ಮತ್ತು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಅವರ ಪರಂಪರೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನಮ್ಮ ದೊಡ್ಡ ಗೌರವವಾಗಿದೆ ಎಂದಿದ್ದಾರೆ.