ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಪೋಷಕರಾಗಲಿದ್ದಾರೆ. ಈ ಸಿಹಿ ಸುದ್ದಿಯನ್ನ ಸೋಮವಾರ ಬೆಳಗ್ಗೆ ಸ್ವತಃ ಅಲಿಯಾ ಭಟ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ನಟಿ ಆಲಿಯಾ ಭಟ್, “ನಮ್ಮ ಮಗು… ಶೀಘ್ರದಲ್ಲೇ ಬರಲಿದೆ” ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸೋನೋಗ್ರಫಿ ಚಿತ್ರದ ಪೋಟೋವನ್ನ ಹಂಚಿಕೊಂಡಿದ್ದಾರೆ.
ಈ ವರ್ಷ ಕಳೆದ ಏಪ್ರಿಲ್ 14 ರಂದು ರಣಬೀರ್ ಮತ್ತು ಆಲಿಯಾ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾವಾಗಿದ್ದರು. ಮದುವೆಯಾಗಿ ಎರಡು ತಿಂಗಳ ನಂತರ, ಆಲಿಯಾ ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾಗಳು ಕೈಯಲ್ಲಿರುವಾಗ ಮದುವೆ, ಸಂಸಾರ, ಜೊತೆಗೆ ಮಗುವಿನ ಆರೈಕೆಯತ್ತ ಆಲಿಯಾ ಮನಸ್ಸು ಮಾಡಿದ್ದಾರೆ. ಒಟ್ನಲ್ಲಿ ಆಲಿಯಾ ಖುಷಿ ನೋಡಿ ಫ್ಯಾನ್ಸ್, ಚಿತ್ರರಂಗದ ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.