ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಈ ಬಾರಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ.. ವಿಶೇಷ ಅಂದ್ರೆ ಕಾಲಿವುಡ್ ನ ಖ್ಯಾತ ನಟರಾದ ಸೂರ್ಯ , ಬಾಲಿವುಡ್ ನ ಸ್ಟಾರ್ ನಟಿ ಕಾಜಲ್ ಗೂ ಸ್ಥಾನ ಸಿಕ್ಕಿದೆ… ಬಾಲಿವುಡ್ ನ ನಿರ್ದೇಶಕಿ ರೀಮಾ ಕಗ್ತಿ ಸಹ ಆಯ್ಕೆಯಾಗಿದ್ದಾರೆ,..
ಸೂರ್ಯ ನಟನೆಯ ಜೈ ಭೀಮ್, ಸೂರರೈ ಪೊಟ್ರೊ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಜೈ ಭೀಮ್ ಸಿನಿಮಾ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು.. ಇದೀಗ ಆಸ್ಕರ್ ಕಮಿಟಿಗೆ ಆಯ್ಕೆಯಾಗುವ ಗೌರವ ಅವರಿಗೆ ಲಭಿಸಿದೆ..
ನಿರ್ದೇಶಕ, ಬರಹಗಾರ ಸೇರಿದಂತೆ ಒಟ್ಟು ಆಸ್ಕರ್ ನಲ್ಲಿ 17 ಶಾಖೆಗಳು ಇರಲಿವೆ. ಅವುಗಳಲ್ಲಿ ಒಂದನ್ನು ಸೂರ್ಯ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಸೂರ್ಯ ಅವರು ಯಾವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಕಾದು ನೋಡಬೇಕಾಗಿದೆ..