KGF ಖಳನಾಯಕನ ಕಾರು ಅಪಘಾತ….
KGF ಸಿನಿಮಾದಲ್ಲಿ ಖಳನಾಯಕ ಆಂಡ್ರೂಸ್ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದ ನಟ ಅವಿನಾಶ್ ಅವರ ಕಾರು ಬೆಂಗಳೂರಿನಲ್ಲಿ ಅಪಘಾತಕ್ಕೊಳಗಾಗಿದೆ. ಅವಿನಾಶ್ ಅವರು ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಗೂಡ್ಸ್ ಲಾರಿಯೊಂದು ಕಾರಿಗೆ ಡಿಕಕಿ ಹೊಡೆದಿದ್ದು, ಅವಿನಾಶ್ ಅವರ ಕಾರು ಸಂಪೂರ್ಣ ಜಖಂಗೊಂಡಿದೆ.
ಆದ್ರೆ ಅದೃಷ್ಟವಶಾತ್ ಘಟನೆಯಲ್ಲಿ ಅವಿನಾಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಕ್ಯಾಂಟರ್ ಚಾಲಕ ಶಿವಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.