ಮಲಯಾಳಂ ನಟಿ ಮತ್ತು ಸಹಾಯಕ ನಿರ್ದೇಶಕಿ ಅಂಬಿಕಾ ರಾವ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾದರು. 58ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿದ್ದಾರೆ.. ಜನಪ್ರಿಯ ಕೌಟುಂಬಿಕ ನಾಟಕ ಕುಂಬಳಂಗಿ ನೈಟ್ಸ್ನಲ್ಲಿನ ಪಾತ್ರಕ್ಕಾಗಿ ನಟಿ ಹೆಚ್ಚು ಹೆಸರುವಾಸಿಯಾಗಿದ್ದರು.
ವರದಿಯ ಪ್ರಕಾರ, ಅಂಬಿಕಾ ಅವರು ಕೋವಿಡ್-19 ಸೋಂಕಿಗೆ ಒಳಗಾದ ನಂತರ ದೀರ್ಘಕಾಲದವರೆಗೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ತ್ರಿಶೂರ್ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ನಟಿಯ ನಿಧನದ ಸುದ್ದಿ ಮಲಯಾಳಂ ಚಿತ್ರರಂಗದಲ್ಲಿ ಆಘಾತ ಉಂಟುಮಾಡಿದೆ.. ಸಿನಿಮಾರಂಗದವರಿಗೆ ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.. ನಟಿಯು ತಮ್ಮ ಮಕ್ಕಳಾದ ರಾಹುಲ್ ಮತ್ತು ಸೋಹನ್ ಅವರನ್ನು ಅಗಲಿದ್ದಾರೆ.
ಅವರು 2000ರ ಆರಂಭದಲ್ಲಿ ಸಹಾಯಕ ನಿರ್ದೇಶಕಿಯಾಗಿ ಮಾಲಿವುಡ್ಗೆ ಕಾಲಿಟ್ಟರು. ಎರಡು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅಂಬಿಕಾ ರಾವ್ ಅವರು ಬಾಲಚಂದ್ರ ಮೆನನ್, ಶಫಿ, ಅನ್ವರ್ ರಶೀದ್ ಮತ್ತು ವಿನಯನ್ ಸೇರಿದಂತೆ ಉದ್ಯಮದ ಹಲವಾರು ಹೆಸರಾಂತ ನಿರ್ದೇಶಕರಿಗೆ ಸಹಾಯ ಮಾಡಿದರು.
ಅಂಬಿಕಾ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಮೀಶಾ ಮಾಧವನ್, ಸಾಲ್ಟ್ ಅಂಡ್ ಪೆಪ್ಪರ್, ಥಮಾಶಾ, ಮತ್ತು ಅನುರಾಗ ಕಾರಿಕ್ಕಿನ್ ವೆಲ್ಲಾಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವರು ವೈರಸ್ ಮತ್ತು ಕುಂಬಳಂಗಿ ನೈಟ್ಸ್ನಂತಹ ಹಿಟ್ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು..