ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್.. ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ , ಇಲ್ಲ ಪ್ರೇಮಿ , ಪತಿ ವಿಚಾರವಾಗಿಯೇ ಸುದ್ದಿಯಲ್ಲಿರೋದು ಹೆಚ್ಚು.. ಇತ್ತೀಚೆಗೆ ಅವರು ಮೈಸೂರಿನ ಹುಡುಗನ ಜೊತೆಗೆ ಪ್ರೀತಿಯಲ್ಲಿರೋದಾಗಿ ಹೇಳಿಕೊಂಡಿದ್ದರು..
ಇದೀಗ ತಮ್ಮ ಹೊಸ ಬಾಯ್ ಫ್ರೆಂಡ್ ಜೊತೆಗೆ ದುಬೈ ಟ್ರಿಪ್ ಹೋಗಿ ಬಂದಿದ್ಧಾರೆ..
ಅಂದಹಾಗೆ ರಾಕಿ ಡಿವೋರ್ಸ್ ಪಡೆದ ನಂತರ ಮೈಸೂರಿನ ಆದಿಲ್ ಎಂಬ ಹುಡುಗನ ಜೊತೆ ತಿರುಗುತ್ತಿದ್ದಾರೆ. ಮಾಧ್ಯಮಗಳಿಗೆ ಆ ಹುಡುಗನನ್ನು ಲವರ್ ಎಂದೇ ಪರಿಚಯಿಸುತ್ತಿದ್ದಾರೆ. ಈಗಾಗಲೇ ರಾಕಿ ಲವರ್ ಒಂದು ಬಿಎಮ್ ಡಬ್ಲು ಕಾರು ಮತ್ತು ದುಬೈನಲ್ಲಿ ಒಂದು ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನಂತೆ. ಈ ವಿಷಯವನ್ನು ಸ್ವತಃ ರಾಕಿ ಸಾವಂತ್ ಅವರೇ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಬಟ್ಟೆ ವಿಚಾರವಾಗಿ ಮಾತನಾಡಿರೋ ರಾಕಿ ನನ್ನ ಜೀವನಕ್ಕೆ ಆದಿಲ್ ಖಾನ್ ಬಂದ ಮೇಲೆ ಸಾಕಷ್ಟು ಬದಲಾವಣೆ ಆಗಿದೆ. ಯಾವ ಕಾರ್ಯಕ್ರಮದಲ್ಲಿ ಎಂತಹ ಬಟ್ಟೆ ಹಾಕಿಕೊಳ್ಳಬೇಕು ಎಂದು ಅವನೇ ನಿರ್ಧಾರ ಮಾಡುತ್ತಾನೆ. ನಾನು ಅರೆಬರೆ ಬಟ್ಟೆಯನ್ನು ಹಾಕಿಕೊಳ್ಳಲು ಆದಿಲ್ ಮತ್ತು ಅವನ ಕುಟುಂಬ ಒಪ್ಪುವುದಿಲ್ಲ. ಹಾಗಾಗಿ ಮೈಮುಚ್ಚುವಂತಹ ಬಟ್ಟೆಗಳನ್ನೇ ನಾನು ಧರಿಸುತ್ತೇನೆ. ಅವರ ಕುಟುಂಬ ನನ್ನನ್ನು ಹೇಗೆ ಕಾಣಲು ಬಯಸುತ್ತದೆಯೋ ಹಾಗೆಯೇ ನಾನೂ ಕೂಡ ಬದುಕುತ್ತೇನೆ ಎಂದಿದ್ದಾರೆ.
ಅಲ್ಲದೇ ಯಾವ ಹುಡುಗಿಯೂ ಎದೆ ಸೀಳು ಕಾಣುವಂತಹ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಸಿನಿಮಾ ರಂಗವೇ ಅದನ್ನು ಬೇಡುತ್ತದೆ. ಅದನ್ನು ಮಾಡದೇ ಇದ್ದರೆ ಅವಕಾಶ ಕೂಡ ಸಿಗುವುದಿಲ್ಲ. ನಮ್ಮಂತವರಿಗೆ ಗಾಡ್ ಫಾದರ್ ಇಲ್ಲ. ಹಾಗಾಗಿ ಸಿನಿಮಾ ರಂಗದ ಅಪೇಕ್ಷೆಯಂತೆ ನಾವು ಇರಲೇಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಇನ್ಮುಂದೆ ತಾವು ಆ ರೀತಿಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.