ಒಂದು ಟೈಮ್ ನಲ್ಲಿ ಕರಣ್ ಜೋಹರ್ ಹಾಗೂ ಶಾರುಖ್ ಕಾಂಬಿನೇಷನ್ ನ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿತ್ತು.. ಇವರ ಕಾಂಬಿನೇಷನ್ ನಲ್ಲಿ ಯಾವುದೇ ಸಿನಿಮಾ ಬರಲಿ , ಬ್ಲಾಕ್ ಬಾಸ್ಟರ್ ಹಿಟ್ ಆಗ್ತಿತ್ತು.. ಆಗ ಶಾರುಖ್ ಹಾಗೂ ಕರಣ್ ಜೋಹರ್ ಕೂಡ ಆತ್ಮೀಯ ಸ್ನೇಹಿತರಾಗಿದ್ದರು.. ಅವರ ನಡುವೆ ತುಸು ಹೆಚ್ಚೇ ಆಪ್ತತೆ ಇತ್ತಾದ್ರೆ , ಅದು ಬೇರೆ ರೀತಿಯ ಮಾತುಗಳಿಗೆ ಎಡೆ ಮಾಡಿಕೊಟ್ಟಿತ್ತು..
ಈಗ ಸಲಿಂಗ ಪ್ರೇಮ ಕಾಮನ್ ಎನ್ನುವಂತಾಗಿದ್ರೂ ವಿದೇಶ ಬಿಟ್ಟು ಏಷ್ಯಾ , ಅದ್ರಲ್ಲೂ ಭಾರತದಲ್ಲಿ ಈಗಲೂ ಜನರು ಇದನ್ನ ಸ್ವೀಕರಿಸಲು ಹಿಂಜರಿಯುತ್ತಾರೆ.. ಅಂತಹದ್ರಲ್ಲಿ ಆ ಟೈಮ್ ನಲ್ಲಿ ಶಾರುಕ್ ಹಾಗೂ ಕರಣ್ ಜೋಹರ್ ನಡುವೆ ಕುಚ್ ಕುಚ್ ಹೇ.. ಇಬ್ರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗಳು ಸಂಚಲನವನ್ನೇ ಸೃಷ್ಟಿ ಮಾಡಿತ್ತು..
ಈ ಬಗ್ಗೆ ಕರಣ್ ಜೋಹರ್ ಅವರು ಜೀವನಾಧರಿತವಾಗಿ ಬರೆದಿರುವ ಪುಸ್ತಕ ‘ ದಿ ಅನ್ ಸ್ಯೂಟೆಬಲ್ ಬಾಯ್ ನಲ್ಲಿ ‘ ಉಲ್ಲೇಖಿಸಿ ನನಗೆ ಆ ವಿಚಾರ ತುಂಬಾ ನೋವುಂಟು ಮಾಡಿತ್ತು ಎಂದಿದ್ದಾರೆ..
ಅಲ್ಲದೇ ಈ ಪುಸ್ತಕದಲ್ಲಿ ಅನೇಕ ವಿಚಾರಗಳನ್ನ ಬರೆದಿದ್ದಾರೆ. ಶಾರುಖ್ ಖಾನ್ ನನ್ನ ತಂದೆ ಸಮಾನರು ಎಂದೂ ಗೌರವ ಸೂಚಿಸಿದ್ದಾರೆ. ಜೊತೆಗೆ ಇಂತಹ ವದಂತಿಗಳಿಂದ ಸಾಕಷ್ಟು ಸಂಕಟ ಅನುಭವಿಸಿದ್ದಾಗಿಯೂ ತಿಳಿಸಿದ್ದಾರೆ…