ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಅಂಡರ್ ವರ್ಲ್ಡ್ ಗ್ಯಾಂಗ್ ಒಂದು ಕೊಲೆ ಬೆದರಿಕೆ ಹಾಕಿತ್ತು.. ಇದೀಗ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ಕೊಲೆ ಬೆದರಿಕೆ ಪತ್ರ ಬಂದಿದೆ..
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಾಸವಿರುವ ಮುಂಬೈನ ವರ್ಸೋವಾದ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರನ ಬಂದಿದೆ.. ಆದ್ರೆ ಯಾರು ಕೊಲೆ ಬೆದರಿಕೆ ಹಾಕಿದ್ದಾರೆಂದು ಪತ್ರದಲ್ಲಿ ಉಲ್ಲೇಖವಾಗಿಲ್ಲ..
ಈ ಬಗ್ಗೆ ಸ್ವರಾ ಭಾಸ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ರದಲ್ಲಿ, ‘ಈ ದೇಶದ ಯುವಕರು ವೀರ ಸಾವರ್ಕರ್ ಬಗೆಗಿನ ಅವಹೇಳನವನ್ನು ಸಹಿಸುವುದಿಲ್ಲ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಅಂದ್ಹಾಗೆ ನಟಿ ಸ್ವರಾ ಭಾಸ್ಕರ್ RSS, ಹಿಂದೂ ಮೂಲಭೂತವಾದಿತನ, ಬಿಜೆಪಿಯ ನಡೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಸಾವರ್ಕರ್ ಬಗ್ಗೆಯೂ ಕೆಲವು ಟೀಕೆಗಳನ್ನು ಮಾಡಿದ್ದರು. ಅದೇ ಕಾರಣದಿಂದ ಈಗ ಸ್ವರಾ ಅವರಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗುತ್ತಿದೆ.
ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸ್ವರಾ ಭಾಸ್ಕರ್ ಈ ಬಗ್ಗೆ ದೂರು ನೀಡಿದ್ದಾರೆ..