ತೆಲುಗು ಚಿತ್ರರಂಗದ ಚಾಕೊಲೇಟ್ ಬಾಯ್ ರಾಮ್ ಪೋತಿನೇನಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಮ್ ಶೀಘ್ರದಲ್ಲೇ ಪ್ರೇಮ ವಿವಾಹವಾಗಲಿದ್ದಾತೆ ಎನ್ನುವ ಸುದ್ದಿ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ರಾಮ್ ಪೋತಿನೇನಿ ತನ್ನ ಹೈಸ್ಕೂಲ್ ಗೆಳತಿಯನ್ನ ಬಾಳಸಂಗಾತಿಯಾಗಿ ವರಿಸಲಿದ್ದಾರೆ ಎಂದು ಮಾಹಿತಿ ಇದೆ. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದರಿಂದ… ರಾಮ್ ಅವರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ನಡೆಯುತ್ತಿವೆ.
ಈ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಮದುವೆ ಜರುಗುವ ನಿರೀಕ್ಷೆಯಿದೆ. ರಾಮ್ ಅವರ ಕುಟುಂಬ ಸದಸ್ಯರು ಮದುವೆ ದಿನಾಂಕದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ರಾಮ್ ಮತ್ತು ಆತನ ಗೆಳತಿ ಶಾಲಾ ಸಹಪಾಠಿಗಳಾಗಿದ್ದು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದ್ರೆ ರಾಮ್ ಪೊತಿನೇನಿ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ… ಓ ದೇವರೇ ನಿಲ್ಲಿಸಿ, ನಾನು ಯಾವುದೇ ಸೀಕ್ರೆಟ್ ಹೈಸ್ಕೂಲ್ ಪ್ರಿಯತಮೆಯನ್ನು ಮದುವೆಯಾಗುತ್ತಿಲ್ಲ ಎಂದು ನನ್ನ ಸ್ವಂತ ಕುಟುಂಬ ಮತ್ತು ಸ್ನೇಹಿತರಿಗೆ ಮನವರಿಕೆ ಮಾಡುವ ಹಂತಕ್ಕೆ ತಲುಪಿದ್ದೇನೆ.
ಹೈಸ್ಕೂಲ್ ಗೆ ನಾನು ಅಷ್ಟೇನೂ ಹೋಗಿಲ್ಲ ಎಂದು ನಟ ರಾಮ್ ಟ್ವೀಟ್ ಮೂಲಕ ಎಲ್ಲಾ ತಮ್ಮ ಮದುವೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.. ಸದ್ಯಕ್ಕೆ ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮ್ ನಟಿಸಿರುವ ‘ವಾರಿಯರ್’ ಚಿತ್ರ ಜುಲೈ 14 ರಂದು ಬಿಡುಗಡೆಯಾಗಲಿದೆ.