ಮಲಯಾಳಂ ಚಲನಚಿತ್ರೋದ್ಯಮವು ತನ್ನ ಸಿನಿಮಾದ ಉತ್ತಮ ಕಂಟೆಂಟ್ ವಿಚಾರದಿಂದಲೇ ಇಷ್ಟವಾಗುತ್ತೆ..
2022 ರ ಮೊದಲಾರ್ಧವು ಮುಗಿದಿದೆ.. 6 ತಿಂಗಳು ಕಂಪ್ಲೀಟ್ ಆಗಿದೆ… 2022 ರಲ್ಲಿ ಇಲ್ಲಿವರೆಗೂ ತೆರೆಕಂಡ ಬಿಡುಗಡೆಗೊಂಡು ಇಲ್ಲಿಯವರೆಗೂ ಹಹಿಟ್ ಆದ , ಮಿಸ್ ಮಾಡಿಯೇ ಕೊಳ್ಳಬಾರದಂತಹ ಮಲಯಾಳಂ ಸಿನಿಮಾಗಳನ್ನ ನೋಡೋದಾದ್ರೆ…
ಭೀಷ್ಮ ಪರ್ವಂ
ಮೊದಲನೇಯದದ್ದಾಗಿ ಮಮ್ಮುಟ್ಟಿ ಅಭಿನಯದ ಭೀಷ್ಮ ಪರ್ವಂ ಮಲಯಾಳಂ ಚಿತ್ರರಂಗದಲ್ಲಿ ಅತಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 1980 ರ ದಶಕದ ಕಥೆಯಿದಾಗಿದ್ದು ಮೈಕೆಲ್ (ಮಮ್ಮುಟ್ಟಿ) ನೇತೃತ್ವದ ಶ್ರೀಮಂತ ವ್ಯಾಪಾರ ಗುಂಪಿನ ಕುಟುಂಬದ ಸುತ್ತ ಹೆಣೆದ ಕಥೆಯಾಗಿದೆ.
ಅಮಲ್ ನೀರದ್-ನಿರ್ದೇಶನ ಮತ್ತು ನಿರ್ಮಾಣದ ಚಲನಚಿತ್ರವು ವಿಶ್ವಾದ್ಯಂತ 80 ಕೋಟಿ ಕಲೆಕ್ಷನ್ ನೊಂದಿಗೆ ಜಾಗತಿಕವಾಗಿ ಮೂರನೇ ಅತಿದೊಡ್ಡ ಮಾಲಿವುಡ್ ಚಲನಚಿತ್ರವಾಗಿದೆ.
ಹೃದಯಂ
ಪ್ರಣವ್ ಮೋಹನ್ನ ಲಾಲ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ದರ್ಶನಾ ರಾಜೇಂದರ್ ಅವರ ಹೃದಯಂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತು.. ಹೃದಯಂ ಒಂದು ರೋಮ್ಯಾಂಟಿಕ್ ಚಿತ್ರವಾಗಿದ್ದು ಅದು ನಿಮ್ಮ ಹೃದಯವನ್ನು ಸ್ಪರ್ಶಿಸುತ್ತದೆ ಮತ್ತು ನಿಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಇದೊಂದು ಫೀಲ್-ಗುಡ್ ಚಲನಚಿತ್ರವಾಗಿದೆ..
ಜನ ಗಣ ಮನ
ಪೃಥ್ವಿರಾಜ್ ಸುಕುಮಾರನ್ ಜನ ಗಣ ಮನ ಮೂಲಕ ಮಲಯಾಳಂ ಪ್ರೇಕ್ಷಕರನ್ನು ಮಾತ್ರವಲ್ಲದೆ ನೆಟ್ ಫ್ಲಿಕ್ಸ್ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾವೂ ಕೂಡ ಹೌದು. ಈ ಚಿತ್ರವು ಕಾಲೇಜು ರಾಜಕೀಯ, ಜಾತೀಯತೆ, ಪೊಲೀಸ್ ಅನ್ಯಾಯ ಮತ್ತು ಹೆಚ್ಚಿನವುಗಳ ಸುತ್ತ ಸುತ್ತುವ ನ್ಯಾಯಾಲಯದ ನಾಟಕವಾಗಿದೆ. ಜನ ಗಣ ಮನ 50 ಕೋಟಿ ಕ್ಲಬ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.
CBl 5: ದಿ ಬ್ರೈನ್
ಮಮ್ಮುಟ್ಟಿ ನಟಿಸಿದ ಸಿಬಿಐ ಚಲನಚಿತ್ರ ಸರಣಿಯ ಐದನೇ ಸೀಕ್ವೆಲ್ ಇದು.. ಸೇತುರಾಮ ಅಯ್ಯರ್ ಎಂಬ ಅಪ್ರತಿಮ ಪಾತ್ರ ಜನರಿಗೆ ಸಖತ್ ಇಷ್ಟವಾಯ್ತು.. ಇದು 1988 ರಲ್ಲಿ ಪ್ರಾರಂಭವಾದ CBI ಫ್ರಾಂಚೈಸ್ ನ ಐದನೇ ಚಿತ್ರವಾಗಿದೆ. ಈ ಸಿನಿಮಾ ವಿಶ್ವಾದ್ಯಂತ 50 ಕೋಟಿ ಕಲೆಕ್ಷನ್ ಮಾಡಿದೆ.