ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾದ ಕ್ರಾಂತಿ ಈಗಾಗಲೇ ರಾಜ್ಯದಲ್ಲಿ ಶುರುವಾಗಿಬಿಟ್ಟಿದೆ.. ಒಂದೆಡೆ ಮಾಧ್ಯಮದವರು ಡಿ ಬಾಸ್ ಸಿನಿಮಾವನ್ನ ಬಾಯ್ಕಾಟ್ ಮಾಡುವ ಪ್ಲಾನ್ ನಲ್ಲಿದ್ರೆ ,, ಮತ್ತೊಂದ್ ಕಡೆ ದಾಸನ ಅಭಿಮಾನಿಗಳು ಮೀಡಿಯಾದವರ ಎದುರು ತೊಡೆ ತೊಟ್ಟು ಅದ್ಧೂರಿಯಾಗಿ ಸಿನಿಮಾವನ್ನ ಪ್ರಮೋಷನ್ ಮಾಡ್ತಾ ಇದ್ದಾರೆ..
ಫ್ಯಾನ್ಸ್ ದಚ್ಚು ಸಿನಿಮಾವನ್ನ ರಾಜ್ಯಾದ್ಯಂತ ಸಖತ್ ಅದ್ಧೂರಿಯಾಗಿಯೇ ರಾಜಾರೋಷವಾಗಿ ಪ್ರಚಾರ ಮಾಡ್ತಾ ಇದ್ದಾರೆ.. ಈಗಿನಿಂದಲೇ ರಾಜ್ಯದಲ್ಲಿ ಕ್ರಾಂತಿ ಜಾತ್ರೆ ಶುರುವಾಗಿಬಿಟ್ಟಿದೆ.. ಈಗಾಗಲೇ ಸಿನಿಮಾದ ಥೀಮ್ ಪೋಸ್ಟರ್, ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ..
ಈಗಾಗಲೇ ಬಹುತೇಕ ಟಾಕಿ ಪೋರ್ಷನ್ ಶೂಟಿಂಗ್ ಮುಕ್ತಾಯವಾಗಿದೆ. ಕ್ರಾಂತಿ ಸಿನಿಮಾ ಸಾಂಗ್ ಶೂಟಿಂಗ್ಗೆ ತಯಾರಿ ಶುರುವಾಗಿದೆ.
ಸಿನಿಮಾದಲ್ಲಿ ದರ್ಶನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ..
Better late than never!♥️#kranti at Poland@dasadarshan BOSS@shylajanag pic.twitter.com/YcCRHmNQoW
— Rachita Ram (@RachitaRamDQ) July 2, 2022
ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದೆ.. ಕ್ರಾಂತಿ ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಕೂಡ ಮುಖ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.. ಈಗಾಗಲೇ ಬೆಂಗಳೂರು, ಹೈದರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.. ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದರ ಜೊತೆಗೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.
ಇನ್ನೂ ಇದೀಗ ಸಿನಿಮಾ ತಂಡ ವಿದೇಶಕ್ಕೆ ಹೊರಟಿದೆ.. ಸಿನಿಮಾತಂಡ ಪೋಲ್ಯಾಂಡ್ ಗೆ ಪಯಣ ಬೆಳೆಸಿದ್ದು ರಚಿತ ರಾಮ್ ದರ್ಶನ್ ಹಾಗೂ ಇತರರು ಫ್ಲೈಟ್ ನಲ್ಲಿರುವ ಫೋಟೋ ಸಖತ್ ವೈರಲ್ ಆಗಿದೆ.. ಅಂದ್ಹಾಗೆ ಈ ಸಿನಿಮಾದಲ್ಲಿ ದರ್ಶನ್ ಅವರು NRI ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
https://twitter.com/i/status/1542735513135656961
https://twitter.com/i/status/1542755993158705152