ಸ್ಯಾಂಡಲ್ ವುಡ್ ನ ಸ್ಟಾರ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ… ಸಮಸ್ಕಾ ,,, ನಮಸ್ಕಾರ… ನಮಸ್ಕಾರ ಇದು ಕಾಮಿಡಿ ಟೈಮ್ ಅಂತ ಅಂದ್ಕೊಂಡೇ ,, ಕಿರುತೆರೆಯಲ್ಲಿ ಫೇಮಸ್ ಆಗಿ ಸ್ಯಾಂಡಲ್ ವುಡ್ ಗೆ ಹಾರಿದ ಗಣೇಶ್ ,,, ಸಿನಿಮಾರಂಗದಲ್ಲಿ ಸುವರ್ಣವಾಗಿಯೇ ಮಿಂಚಿದವರು.. ವಿಭಿನ್ನ ಮ್ಯಾನರಿಸಮ್ ನಿಂದಲೇ ಗಣೇಶ್ ಜನರ ಮನಸ್ಸಿಗೆ ಹತ್ತಿರವಾದರು..
ಮುಂಗಾರು ಮಳೆ , ಚೆಲುವಿನ ಚಿತ್ತಾರ , ಚೆಲ್ಲಾಟ , ಹುಡುಗಾಟ ಗಾಳಿಪಟದಂತಹ ಸಿನಿಮಾಗಳ ಮೂಲಕವೇ ಸೂಪರ್ ಹಿಟ್ ಆದ ನಟ ಆ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡಿದರು.. ಕಾಮಿಡಿಗೂ ಸೈ , ಆಕ್ಷನ್ ಸೀನ್ಸ್ ಗೂ ಸೈ ಎನಿಸಿಕೊಂಡರು , ಲವರ್ ಬಾಯ್ ಆಗಿಯೂ ಮಿಂಚಿ, ಫ್ಯಾಮಿಲಿ ಮ್ಯಾನ್ ಅವತಾರದಲ್ಲೂ ದರ್ಶನ ಕೊಟ್ಟರು..
ಸದ್ಯಕ್ಕೆ ಈಗ ಗಣೇಶ್ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಈ ಸಿನಿಮಾದ ಸ್ಯಾಂಡಲ್ ವುಡ್ ನ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳಲ್ಲಿ ಒಂದಾಗಿದೆ.. ಈ ಸಿನಿಮಾದಲ್ಲಿ ಮತ್ತೆ ಯೋಗರಾಜ್ ಭಟ್ , ಗಣೇಶ್ , ಸೋನು ನಿಗಮ್ , ಜಯಂತ್ ಕಾಯ್ಕಿಣಿ ಕಾಂಬಿನೇಷನ್ ಒಂದಾಗಿದೆ.. ಹೀಗಾಗಿ ಈ ಸಿನಿಮಾ ಸೂಪರ್ ಹಿಟ್ ಆಗೋ ಜೊತೆಗೆ ಗಾಳಿಪಟ ಸಿನಿಮಾದಂತೆಯೇ ಈ ಸಿನಿಮಾದ ಹಾಡುಗಳು ಸಹ ಸೂಪರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ..
ಯೋಗರಾಜ್ ಭಟ್ ನಿರ್ದೇಶಿಸಿರುವ ಗಾಳಿಪಟ 2 ಸಿನಿಮಾದ ಹೊಸ ಹಾಡು ರಿಲೀಸ್ ಆಗಿದೆ.. ನಾನಾಡದ ಮಾತೆಲ್ಲವ ಕದ್ದಾಲಿಸು ಎಂಬ ಈ ಹಾಡಿಗೆ ಸೋನು ನಿಗಮ್ ಅವರು ಧ್ವನಿಯಾಗಿದ್ದಾರೆ… ಈ ಹಾಡನ್ನು ಜಯಂತ್ ಕಾಯ್ಕಿಣಿ ರಚಿಸಿದ್ದಾರೆ
ಮತ್ತೊಂದೆಡೆ ಗಣೇಶ್ ಅವರ ಬರ್ತ್ ಡೇ ಪ್ರಯುಕ್ತ ಕಾಮನ್ ಡಿಪಿಯೂ ರಿಲೀಸ್ ಆಗಿ ವೈರಲ್ ಆಗ್ತಿದೆ.. ಗಣೇಶ್ ಅವರಿಗೆ ಸಿನಿಮಾ ತಾರೆಯರು , ಆಪ್ತರು , ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಇನ್ನೂ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಿರುವ ಗಣೇಶ್ ಪತ್ರವೊಂದನ್ನ ಬರೆದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.. ‘ ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ನನ್ನ ಯಶಸ್ಸು ನಿಮ್ಮದೆ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಅಭಿಮಾನಕ್ಕೆ ನಾನು ಋಣಿ ಎಂದು ಬರೆದುಕೊಂಡಿದ್ದರು..