ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ..
ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಫೇಮ್ , ಕ್ರೇಜ್ ಬಾಲಿವುಡ್ ನಲ್ಲಿ ಮತ್ತಷ್ಟು ಹೆಚ್ಚಾಗಿದೆ..
ಈ ಚಿತ್ರದಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಕ್ತಚಂದನದ ಸ್ಮಗ್ಲರ್ ಆಗಿ ಪರ್ಫೆಕ್ಟ್ ಮಾಸ್ ಗೆಟ್ ಅಪ್ ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ತಗ್ಗೇದೆಲೇ ಎಂಬ ಐಕಾನಿಕ್ ಮ್ಯಾನರಿಸಂ ದೇಶ ವಿದೇಶಗಳಲ್ಲಿ ಜನಪ್ರಿಯತೆಯನ್ನ ಗಳಿಸಿದೆ.
ಜನಪ್ರಿಯ ಕ್ರಿಕೆಟಿಗರು ಕೂಡ ಪುಷ್ಪಾ ಚಿತ್ರದ ಐಕಾನಿಕ್ ಮ್ಯಾನರಿಸಂನೊಂದಿಗೆ ಚಿತ್ರಕ್ಕೆ ಸಾಕಷ್ಟು ಪ್ರಚಾರ ಕೊಟ್ಟಿದ್ದರು. ಈಗ ಮತ್ತೊಂದು ಕ್ರೀಡೆಗೂ ತಗ್ಗೆದೆಲೇ ಹವಾ ಕಾಲಿಟ್ಟಿದೆ.
ವಿಶ್ವದ ಅತ್ಯಂತ ಜನಪ್ರಿಯ ಶೋ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನಿಂಗ್ ಶೋನಲ್ಲಿ ಭಾರತದ ಕುಸ್ತಿಪಟು ಸೌರವ್ ಗುರ್ಜಾರ್ ಅವರ ಪುಷ್ಪಾ ಮ್ಯಾನರಿಸಂ ಜುಕೆಂಗಾ ನಯಿ ಅಥವಾ ತಗ್ಗೇದೆ ಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಪುಷ್ಟ ಚಿತ್ರದ ಕ್ರೇಜ್ ಎಲ್ಲಯವರೆಗೆ ಮುಟ್ಟಿದೆ ಎನ್ನುವುದಕ್ಕೆ ಸಾಕ್ಷಿ… ಸೌರವ್ ಗುರ್ಜಾರ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಅವರ ಅಭಿಮಾನಿಗಳು ವೀಡಿಯೊಗೆ ಪ್ರತಿಕ್ರಿಯಿಸುತಾ ಶೇರ್ ಮಾಡಿಕೊಳ್ಳುತ್ತಿದ್ದಾರೆ.