ವಿಜಯ್ ದೇವರಕೊಂಡ ಅಭಿನಯದ ಚಿತ್ರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಅಲ್ಲ ಇಂಡಿಯನ್ ಸಿನಿಮಾ ಲೈಗರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.. ಈ ಸಿನಿಮಾಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ.. ಸಿನಿಮಾತಂಡ ಪ್ರಚಾರದಲ್ಲಿ ತೊಡಗಿದೆ..
ಇದೀಗ ಪೋಸ್ಟರ್ ಒಂದನ್ನ ರಿಲೀಸ್ ಮಾಡಿ ನೆಟ್ಟಿಗರ ಉಬ್ಬೇರಿಸಿದೆ ಸಿನಿಮಾ ತಂಡ… ಹೂ ಹಿಡಿದು ಬೆತ್ತಲಾಗಿ ನಿಂತಿರುವ ದೇವರಕೊಂಡ ಪೋಸ್ಟರ್ ಮೇಲೆ ‘ಸಾಲಾ ಕ್ರಾಸ್ ಬ್ರೀಡ್ ‘ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ..
‘ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್ ಲೈನ್ ಗೆ ತಕ್ಕಂತೆ ವಿಜಯ್ ದೇವರಕೊಂಡ ಲೈಗರ್ ಚಿತ್ರದ ಬೆತ್ತಲೆ ಪೋಸ್ಟರ್ ಹಂಚಿಕೊಂಡಿದ್ದಾರೆ. ಮಾನ ಮುಚ್ಚಿಕೊಳ್ಳಲು ಗುಲಾಬಿಯ ಹೂಗಳ ಗುಚ್ಚ ಬಿಟ್ಟರೆ ತುಂಡು ಬಟ್ಟೆಯೂ ಇಲ್ಲದ ಬೋಲ್ಡ್ ಪೋಟೋವನ್ನ ಸೋಶೀಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಪೂರಿ ಜಗನ್ನಾಥ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ಬಾಕ್ಸಿಂಗ್ ಬ್ಯಾಗ್ರೌಂಡ್ ಇಟ್ಟುಕೊಂಡು ಸ್ಪೋರ್ಟ್ಸ್ ಆಕ್ಷನ್ ಡ್ರಾಮವನ್ನ ತೆರೆಗೆ ತರುತ್ತಿದ್ದಾರೆ. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಚಿತ್ರದ ಮೂಲಕ ದಕ್ಷಿಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಶ್ವ ಪ್ರಸಿದ್ಧ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಲೈಗರ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪುರಿ – ಚಾರ್ಮಿ – ಕರಣ್ ಜೋಹರ್ ಒಟ್ಟಾಗಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಲೈಗರ್ ಸುಮಾರು 120 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
A Film that took my everything.
As a performance, Mentally, physically my most challenging role.I give you everything!
Coming Soon#LIGER pic.twitter.com/ljyhK7b1e1— Vijay Deverakonda (@TheDeverakonda) July 2, 2022