ವಿಕ್ರಮ್ ಬಾಕ್ಸ್ ಆಫೀಸ್ ನಲ್ಲಿ ಶೇಕ್ ಮಾಡಿದೆ.. ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ನಟಿಸಿರುವ ಮಲ್ಟಿ ಸ್ಟಾರ್ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ… ಆಕ್ಷನ್ ಥ್ರಿಲ್ಲರ್ ಸಿನಿಮಾ ಈಗ ಹಲವು ದೇಶಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ.
ಇದೀಗ ತಮಿಳುನಾಡು ಮತ್ತು ಕೇರಳದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ ದಕ್ಷಿಣದಲ್ಲಿ ಅಬ್ಬರಿಸಿದೆ. ಇತ್ತೀಚೆಗೆ, ವಿಕ್ರಮ್ ವಿಶ್ವಾದ್ಯಂತ ರೂ 400 ಕೋಟಿ ಕಲೆಕ್ಷನ್ ಮಾಡಿದ್ದಾರೆ..
ಕಮಲ್ ಹಾಸನ್ ಅಭಿನಯದ ತಮಿಳು ಚಲನಚಿತ್ರ ಸಿಂಗಾಪುರ್, ಯುಕೆ, ಯುಎಇ ಮತ್ತು ಇತರ ದೇಶಗಳಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಗಿದೆ. ವರದಿಗಳ ಪ್ರಕಾರ, ವಿಕ್ರಮ್ ಶೀಘ್ರದಲ್ಲೇ ದೇಶೀಯವಾಗಿ 300 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಲಿದ್ದಾರೆ ಎನ್ನಲಾಗಿದೆ..
ಕಮಲ್ ಹಾಸನ್ ಅವರ ಸಿನಿಮಾಗಳ ಪೈಕಿ ಸಾರ್ವಕಾಲಿಕ ಅತ್ಯಂತ ಯಶಸ್ವಿ ತಮಿಳು ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರವು ಜೂನ್ 3 ರಂದು ಪ್ರಪಂಚದಾದ್ಯಂತ ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರ ಎಲ್ಲರನ್ನೂ ಆಕರ್ಷಿಸಿದೆ.