KGF 2 ನ ನಂತರ ರಿಲೀಸ್ ಆದ ಕನ್ನಡದ ಪ್ಯಾನ್ ಇಂಡಿಯಾ ಇಂಡಿಯಾ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ದೇಶಾದ್ಯಂತ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.. ಸಿನಿಮಾ ಸೂಪರ್ ಹಿಟ್ ಆಗಿದೆ..
ಸಿನಿಮಾದಲ್ಲಿ ನಾಯಿ ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಬಗ್ಗೆ ತಿಳಿಸಲಾಗಿದ್ದು , ಭಾವನೆಗಳ ಬೆಸೆಯುವ ಸಿನಿಮಾವಾಗಿದೆ..
ಈ ಸಿನಿಮಾಗೂ ಮೊದಲು ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತಾದ್ರೆ ಹೇಳಿಕೊಳ್ಳುವ ಯಶಸ್ಸು ಸಿನಿಮಾಗೆ ಸಿಕ್ಕಿರಲಿಲ್ಲ..
ಈ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಚಾರ್ಲಿ ಗೆಲುವಿಗೆ ಆ ಪಾಠಗಳೇ ಕಾರಣ ಎಂದಿದ್ದಾರೆ.
ಹೌದು..! ಚಾರ್ಲಿ ಯಶಸ್ಸಿನ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಿಂದ ಕಲಿತ ಪಾಠ ಇಂದು ಚಾರ್ಲಿ ಆಗಲು ಸಾಧ್ಯವಾಗಿದೆ. ಆ ಚಿತ್ರದ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಮಾಡಿಲ್ಲ. ಆ ಸಿನಿಮಾ ಸೋಲು ಎಂದು ಒಪ್ಪಿಕೊಳ್ಳುವುದಿಲ್ಲ. ಅದೊಂದು ದೊಡ್ಡ ಪಾಠ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.