ಹೆಸರಾಂತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಬಹುನಿರೀಕ್ಷೆಯ ‘ಪೊನ್ನಿಯಿನ್ ಸೆಲ್ವನ್: 1’ (PS-1) ಸಿನಿಮಾದಲ್ಲಿ ಬಹುಭಾಷೆಯ ಮಲ್ಟಿ ಸ್ಟಾರ್ ಗಳಿದ್ದು ಸಿನಿಮಾ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.. ಜೊತೆಗೆ ಬಾಹುಬಲಿ , ಪುಷ್ಪ , KGF ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ…
ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.. ‘ ಚೋಳರು ಬರುತ್ತಿದ್ದಾರೆ! ( The Cholas Coming )” ಎಂಬ ಅಡಿಬರಹದೊಂದಿಗೆ ಅನಾವರಣಗೊಳಿಸಲಾಗಿದೆ..

‘ಪೊನ್ನಿಯಿನ್ ಸೆಲ್ವನ್ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು..
ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ತ್ರಿಷಾ, ಕಾರ್ತಿ, ಜಯಂ ರವಿ, ವಿಕ್ರಂ ಪ್ರಭು, ಶರತ್ ಕುಮಾರ್, ಪ್ರಕಾಶ್ ರೈ, ಮಲಯಾಳಂನ ಲಾಲ್, ನಾಸರ್, ರೆಹಮಾನ್ , ಕಿಶೋರ್, ಶೋಭಿತಾ ಧುಲಿಪಾಲಾ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ..
ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯಿನ್ ಸೆಲ್ವನ್’ ಪುಸ್ತಕ ಆಧರಿಸಿದ ಸಿನಿಮಾವಿದಾಗಿದೆ.. ದೊಡ್ಡ ಬಜೆಟ್ ನಲ್ಲಿ ಸಿನಿಮಾ ತಯಾರಾಗ್ತಿದ್ದು ಎರೆಡು ಭಾಗಗಳಲ್ಲಿ ಬರಲಿದೆ..
ಈ ಸಿನಿಮಾದ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಸರಿ ಸುಮಾರು 500 ಕೋಟಿ ಬಜೆಟ್ ಬಜೆಟ್ ನಲ್ಲಿ ಸಿನಿಮಾ ತಯಾರಾಗಿದೆ ಎನ್ನಲಾಗಿದೆ..
ಈ ಸಿನಿಮಾ ಚೋಳರ ಕಾಲದ ಕತೆಯನ್ನು ಆಧರಿಸಿದೆ..