ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದಾರೆ.. ಅಮೆರಿಕಾದ ಖ್ಯಾತ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾದ ನಂತರ ಅಮೆರಿಕಾದಲ್ಲೇ ಸೆಟಲ್ ಆಗಿರುವ ನಟಿ ಆಗಾಗ ಪತಿ ಜೊತೆಗಿನ ಫೋಟೋ ವಿಡಿಯೋಗಳನ್ನ ಶೇರ್ ಮಾಡಿಕೊಳ್ತಾ ಇರುತ್ತಾರೆ..
ಬಾಲಿವುಡ್ ಹಾಲಿವುಡ್ ಎರಡರಲ್ಲೂ ಬ್ಯುಸಿಯಾಗಿರೋ ನಟಿ ಇತ್ತೀಚೆಗೆ ರೆಸ್ಟೋರೆಂಟ್ ಒಂದನ್ನ ಅಮೆರಿಕಾದಲ್ಲಿ ಓಪನ್ ಮಾಡಿದ್ದರು.. ಹೀಗೆ ಸಿನಿಮಾರಂಗದ ಹೊರತು ಬೇರೆ ಬ್ಯುಸಿನೆಸ್ ನಲ್ಲೂ ತೊಡಗಿರುವ ನಟಿ ಇತ್ತೀಚೆಗೆ ಹೊಸ ಉದ್ಯಮವೊಂದನ್ನು ಪ್ರಾರಂಭಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಇದೀಗ ಗೃಹೋಪಯೋಗಿ ವಸ್ತುಗಳ ಬ್ರ್ಯಾಂಡ್ ಒಂದನ್ನು ಸ್ಥಾಪಿಸಿದ್ದಾರೆ. ಜೂನ್ 23ರಂದು ಲಾಂಚ್ ಆದ ಹೊಸ ಸಂಸ್ಥೆಯ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಗೃಹೋಪಯೋಗಿ ವಸ್ತುಗಳ ಜೊತೆಗೆ ಮನೆಯ ಡಿಸೈನ್, ಪ್ಲ್ಯಾನಿಂಗ್, ತಂತ್ರಜ್ಞಾನ ಆಧರಿತ ಸ್ಮಾರ್ಟ್ ಹೋಮ್ ನಿರ್ಮಾಣವನ್ನು ಪ್ರಿಯಾಂಕಾ ಚೋಪ್ರಾರ ಹೊಸ ಸಂಸ್ಥೆ ‘ಸೋನಾ ಹೋಮ್’ ಮಾಡಿಕೊಡಲಿದೆ. ಆದರೆ ಪ್ರಿಯಾಂಕಾ ಚೋಪ್ರಾ ಲಾಂಚ್ ಮಾಡಿರುವ ಸೋನಾ ಹೋಮ್ನ ಗೃಹೋಪಯೋಗಿ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಅಂತಿದ್ದಾರೆ ಅಭಿಮಾನಿಗಳು..
ಸೋನಾ ಹೋಮ್ ಮೂಲಕ ಟೇಬಲ್ ಕ್ಲಾತ್, ಕಪ್ಪು-ಸಾಸರ್, ಬೆಡ್ ಲೈಟ್, ಟವೆಲ್ಗಳು, ಬಾಟಲ್ ಕೂಲರ್, ಸ್ಪೂನು ಇನ್ನಿತರೆ ಕೆಲವು ಗೃಹೋಪಯೋಗಿ ವಸ್ತುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ.. ಆದ್ರೆ ಈ ವಸ್ತುಗಳ ಬೆಲೆ ಅತ್ಯಂತ ದುಬಾರಿಯಾಗಿದೆ..
ಪ್ರಿಯಾಂಕಾ ಚೋಪ್ರಾರ ಸೋನಾ ಹೋಮ್ ನಲ್ಲಿ ಒಂದು ಟೇಬಲ್ ಕ್ಲಾತ್ ಗೆ ಬರೋಬ್ಬರಿ 398 ಡಾಲರ್. ಅಂದ್ರೆ ಭಾರತೀಯ ರುಪಾಯಿಯಲ್ಲಿ 31 ಸಾವಿರಕ್ಕಿಂತೂ ಹೆಚ್ಚು. ಒಂದು ಸಣ್ಣ ಸೈಜಿನ ತಟ್ಟೆಯ ಬೆಲೆ 198 ಡಾಲರ್. ಅಂದ್ರೆ ಭಾರತೀಯ ರುಪಾಯಿಯಲ್ಲಿ 15,700 ರುಪಾಯಿ..
ಅಂದಹಾಗೆ ಅಮೆರಿಕದಲ್ಲಿ ಒಂದು ಐಫೋನ್ 13 ಬೆಲೆ 799 ಡಾಲರ್. ಪ್ರಿಯಾಂಕಾರ ಎರಡು ಸೊನಾ ಹೋಮ್ ಟೇಬಲ್ ಕ್ಲಾತ್ ಬೆಲೆಗೆ ಒಂದು ಹೊಸ ಐಫೋನ್ 13 ಬರುತ್ತದೆ..