ಸ್ಯಾಂಡಲ್ ವುಡ್ ನ ಸ್ಟಾರ್ ನಟ , ನಿರ್ದೇಶಕ ರಿಷಬ್ ಶೆಟ್ಟಿ ಅವರು ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದು , ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.. ಕಾರು ಖರೀದಿಸಿದ ಖುಷಿಯಲ್ಲಿ ಪೂಜೆ ಮಾಡಿಸಿದ್ದು , ಜೊತೆಗೆ ಕೇಕ್ ಕೂಡ ಕತ್ತರಿಸಿ ಸಂಭ್ರಮಿಸಿದ್ದಾರೆ..
ಸದ್ಯ ಅವರ ʻಹರಿಕಥೆ ಅಲ್ಲ ಗಿರಿಕಥೆʼ ಚಿತ್ರದ ಯಶಸ್ಸಿನ ನಂತರ ಹೊಸ ಆಡಿ ಕಾರೊಂದನ್ನ ಖರೀದಿಸಿದ್ದಾರೆ. ಇನ್ನೂ ಪತಿಯನ್ನ ಹೊಗಳಿರುವ ಪ್ರಗತಿ ಶೆಟ್ಟಿ ಅವರು “ನಿಮ್ಮ ಪರಿಶ್ರಮ ಮತ್ತು ಬದ್ಧತೆ ಯಾವಾಗಲೂ ಹೆಮ್ಮೆ ಆಗುತ್ತದೆ” ಎಂದಿದ್ದು ಈ ಪೋಸ್ಟ್ ಈಗ ವೈರಲ್ ಆಗ್ತಿದೆ.. ರಿಷಬ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ..
ಅಂದ್ಹಾಗೆ ರಿಷಬ್ ಶೆಟ್ಟಿ ಸದ್ಯ ಹೊಂಬಾಳೆ ಫಿಲಮ್ಸ್ ಬ್ಯಾನರ್ ನ ಮೂಡಿ ಬರುತ್ತಿರುವ ಕಾಂತಾರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಕಂಟೆಂಟ್ ಬೇಸಡ್ ಸಿನಿಮಾಗಳ ಮೇಲೆಯೇ ಹೆಚ್ಚು ಫೋಕಸ್ ಮಾಡುವ ರಿಷಬ್ ಈಗಾಗಲೇ ಉತ್ತಮ ನಟ ಹಾಗೂ ನಿರ್ದೇಶಕರು ಅನ್ನೋದನ್ನ ಸಾಬೀತುಪಡಿಸಿದ್ದಾರೆ..