Samantha : ಕಾಫಿ ವಿತ್ ಕರಣ್ ಶೋನಲ್ಲಿ ಮದುವೆಯನ್ನ ‘KGF’ ಗೆ ಹೋಲಿಸಿದ ಸಮಂತಾ
ನಾಗಚೈತನ್ಯ ಜೊತೆಗೆ ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಇತಿಶ್ರೀ ಹಾಡಿದ ಟಾಲಿವುಡ್ ನ ಕ್ಯೂಟ್ ಬ್ಯೂಟಿ ಸಮಂತಾ ,, ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.. ಗ್ಲಾಮರಸ್ ಆಗೂ ಅಭಿಮಾನಿಗಳ ಹಾರ್ಟ್ ಗೆ ಬೆಂಕಿ ಇಡ್ತಾರೆ.. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿರುವ ಸ್ಯಾಮ್ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್..
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..

ಈ ನಡುವೆ ಸಮಂತಾ ಬಾಲಿವುಡ್ ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಅವರು ನಡೆಸಿಕೊಡ್ತಿರುವ “ ಕಾಫಿ ವಿತ್ ಕರಣ್” ಶೋ ನಲ್ಲಿ ಮದುವೆ ವಿಚಾರವಾಗಿ ಮಾತನಾಡಿದ್ದು , ಮದುವೆಯನ್ನ ಕನ್ನಡದ ಯಶ್ ಅಭಿನಯದ ‘KGF’ ಸಿನಿಮಾಗೆ ಹೋಲಿಸಿದ್ದಾರೆ..
ಹೌದು ಟಾಕ್ ಶೋ ಕಾಫಿ ವಿತ್ ಕರಣ್ ನಲ್ಲಿ ಅತಿಥಿಯಾಗಿ ಎಪಿಸೋಡ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಬಿಡುಗಡೆ ಆಗಿರುವ ಕಾರ್ಯಕ್ರಮದ ಟ್ರೈಲರ್ ನಲ್ಲಿ ಸಮಂತಾರ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಟ್ರೈಲರ್ ನಲ್ಲಿ ಕಂಡು ಬರುತ್ತಿರುವಂತೆ ನಟಿ ಸಮಂತಾ, ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಕರಣ್ ಜೋಹರ್ ರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಮದುವೆ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದ್ದಾರೆ. ಭಾರತದಲ್ಲಿ ಅಸಂತುಷ್ಟ ಮದುವೆಗಳಿಗೆ ನೀವೇ ಕಾರಣ ಎಂದು ಕರಣ್ ಜೋಹರ್ ಅನ್ನು ದೂರಿದ್ದಾರೆ. ಮದುವೆಗಳು ‘ಕಭಿ ಖುಷಿ ಕಭಿ ಘಮ್’ ರೀತಿಯಲ್ಲಿರುತ್ತವೆ ಎಂದು ತೋರಿಸಿದ್ದೀರಿ. ಆದರೆ ನಿಜ ಜೀವನದಲ್ಲಿ ಅವು ‘ಕೆಜಿಎಫ್’ ಆಗಿರುತ್ತವೆ ಎಂದಿದ್ದಾರೆ.
ಕರಣ್ ಜೋಹರ್ ನಿರ್ಮಾಣದ ‘ಕಭಿ ಖುಷಿ ಕಭಿ ಗಮ್’ ನಲ್ಲಿ ಸುಂದರ ಕುಟುಂಬ, ಸಂತೋಶ ತುಂಬಿರುವ ಸಂಸಾರವನ್ನ ತೋರಿಸಲಾಗಿದೆ. ನಮ್ಮ ಜೀವನ ಸಹ ಅದೇ ಸಿನಿಮಾದ ರೀತಿ ಇರುತ್ತದೆಂದು ಮದುವೆ ಆಗುತ್ತಾರೆ.. ಆದರೆ ಆ ನಂತರ ಗೊತ್ತಾಗುತ್ತದೆ ಮದುವೆ ಎಂಬುದು ‘ಕೆಜಿಎಫ್’ ಮಾದರಿ ಎಂದು. ಜಗಳ, ಮುನಿಸು, ಕಾದಾಟ ಎಲ್ಲವೂ ಇರುತ್ತದೆ ಎಂಬರ್ಥದಲ್ಲಿ ಸಮಂತಾ ಈ ಮಾತು ಹೇಳಿದ್ದಾರೆ.
ಸಮಂತಾ ಬಾಲಿವುಡ್ , ಹಾಲಿವುಡ್ ಗೂ ಪಾದಾರ್ಪಣೆ ಮಾಡ್ತಾ ಇದ್ದಾರೆ.. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಯಶೋಧಾ , ಹಾಗೂ ವಿಜಯ್ ದೇವರಕೊಂಡ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಖುಷಿಯಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ..
ಪುಷ್ಪದಲ್ಲಿ ಸಮಂತಾ ಮೊದಲ ಬಾರಿಗೆ ಐಟಮ್ ಹಾಡಿಗೆ ಹೆಜ್ಜೆ ಹಾಕಿದ್ದರು.. ಸಖತ್ ಗ್ಲಾಮರಸ್ ಆಗಿಯೂ ಕಾಣಿಸಿಕೊಂಡಿದ್ದರು.. ಈ ಡ್ಯಾನ್ಸ್ ಸಿನಿಮಾದ ಹೈಲೇಟ್ ಆಗಿತ್ತು..