ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಕಿಚ್ಚ ಸುದೀಪ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣದ ರಾರಾ ರಕ್ಕಮ್ಮ ಸಾಂಗ್ ಯಾವ್ ಲೆವೆಲ್ ಗೆ ಕ್ರೇಜ್ ಕ್ರಿಯೇಟ್ ಮಾಡಿದೆ ಎಲ್ರಿಗೂ ಗೊತ್ತೇ ಇದೆ.. ಆ ನಂತರದಲ್ಲಿ ಟ್ರೇಲರ್ ರಿಲೀಸ್ ಆಗಿದೆ.. 3 ಡಿ ಯಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಟ್ರೇಲರ್ ನೋಡಿದ್ರೆ ಇದು ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲವೆಂಬಂತೆ ಇದೆ..
ಇದೀಗ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ರಾ ರಾ ರಕ್ಕಮ್ಮ ಸಾಂಗ್ ಇನ್ನೂ ವರೆಗೂ ಟ್ರೆಂಡ್ ಆಗ್ತಿದೆ.. ರೀಲ್ಸ್ ನಲ್ಲೂ ಸದ್ದು ಮಾಡ್ತಿದೆ.. ಈ ನಡುವೆಯೇ ಸಿನಿಮಾದ ಒಂದು ಸೊಗಸಾದ ಹಾಡು ರಿಲೀಸ್ ಆಗಿದೆ..
‘ತಣ್ಣನೆ ಬೀಸೋ ಗಾಳಿ’ ಹಾಡು ರಿಲೀಸ್ ಆಗಿದೆ.. ಈ ಹಾಡು ಲಾಲಿ ಹಾಡಾಗಿದ್ದು, ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ.. ನಿರ್ದೇಶಕ ಅನೂಪ್ ಭಂಡಾರಿಯವರೇ ಸ್ವತಃ ಈ ಹಾಡನ್ನ ರಚಿಸಿರುವುದು ವಿಶೇಷ.. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ.
ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ ಎಂದು ಹಾಡು ಆರಂಭವಾಗುತ್ತದೆ.. ಈ ಹಾಡು ಬಹಳ ಇಂಪಾಗಿದ್ದು , ಜನರ ಮನಗೆಲ್ಲುತ್ತಿದೆ..