ಸ್ಯಾಂಡಲ್ ವುಡ್ ನಟ ಕೋಮಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ… ಹಾಸ್ಯ ಪಾತ್ರಗಳ ಮೂಲಕವೇ ಗಮನ ಸೆಲೆಯುತ್ತಾ ,,, ಸಿನಿಮಾಗಳಲ್ಲಿ ನಾಯಕನಾಗಿಯೂ ಯಶಸ್ವಿ ಕಂಡ ನಟ ಕೋಮಲ್ …
ಇಂದು ಅವರ ಬರ್ತ್ ಡೇ.. ಹೀಗಾಗಿ ಅಭಿಮಾನಿಗಳು , ಆಪ್ತರು , ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಗೋವಿಂದಾಯ ನಮಃ ಸೇರಿದಂತೆ ವಿವಿಧ ಹಾಸ್ಯಪ್ರಧಾನ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ… ಆದ್ರೆ ಕೋಮಲ್ ಅವರು ಕೆಲ ಸಮಯದಿಂದ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ..
ಅಂದ್ಹಾಗೆ ಕೋಮಲ್ ಅವರು ನವರಸ ನಾಯಕ ಜಗ್ಗೇಶ್ ಅವರ ಸಹೋದರ ಎನ್ನುವ ವಿಚಾರ ಎಲ್ರಿಗೂ ಗೊತ್ತಿದೆ.. ಆರಂಭದಲ್ಲಿ ಕೋಮಲ್ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದರು… ಅಂದ್ಹಾಗೆ ಕೋಮಲ್ ಅವರು ಹಾಸ್ಯ ಪಾತ್ರಗಳಿಗೂ ಮೊದಲು ಕಾಣಿಸಿಕೊಂಡಿದ್ದು ಖಳನಟನಾಗಿ.. ಕ್ರಮೇಣ ನಾಯಕರಾಗಿ ಕಾಣಿಸಿಕೊಂಡರು.. 2008ರಲ್ಲಿ ಮಿಸ್ಟರ್ ಗರಗಸ ಸಿನಿಮಾ ಮೂಲಕ ಹೀರೋ ಆಗಿ ನಟಿಸಿದರು..
ನಂತರ ಗೋವಿಂದಾಯ ನಮಃ , ಪುಂಗಿದಾಸ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು.. ಸದ್ಯ ಕೆಲ ವರ್ಷ ಗ್ಯಾಪ್ ತೆಗೆದುಕೊಂಡಿದ್ದ ಕೋಮಲ್ ಅವರ ಕೆಂಪೇಗೌಡ ಸಿನಿಮಾ ಕೊನೆಯದಾಗಿ ತೆರೆಕಂಡಿತ್ತಾದ್ರೂ ಅಂದುಕೊಂಡ ಮಟ್ಟಿಗೆ ಯಶಸ್ಸು ಕಂಡಿಲ್ಲ..