ರಶ್ಮಿಕಾಗೆ ವಿಜಯ್ ದೇವರಕೊಂಡ ಅವರೇ ಸ್ಪೂರ್ತಿ…!!!
ಸ್ಯಾಂಡಲ್ ವುಡ್ Sandalwood ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ನಲ್ಲೇ ಬೇರು ಬಿಟ್ಟು , ಬಾಲಿವುಡ್ ನಲ್ಲಿ ಸ್ಟ್ರಗಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ Rashmika Mandanna ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿ ಆಗಿದೆ.. ಈಗ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಪುಷ್ಪ 2 , ತಮಿಳಿನಲ್ಲಿ ವಿಜಯ್ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..
ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಲವ್ ಲೈಫ್ ವಿಚಾರವಾಗೂ ಗಾಸಿಪ್ ಆಗ್ತಲೇ ಇರುರತ್ತಾರೆ.. ಅದ್ರಲ್ಲೂ ಗೀತಾ ಗೋವಿಂದಂ ಕೋ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಗೆ ಲವ್ವಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡ್ತಲೇ ಇರುತ್ತೆ.. ಗಾಸಿಪ್ ಗೆ ಪುಷ್ಠಿ ಎಂಬಂತೆ ಇಬ್ಬರೂ ಒಟ್ಟಾಗಿ ಹೋಟೆಲ್ , ಜಿಮ್ ಹೊರಗೆ ]ಹೀಗೆ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಇದೀಗ ರಶ್ಮಿಕಾ ವಿಜಯ್ ಬಗ್ಗೆ ಹಾಡಿ ಹೊಗಳಿದ್ದಾರೆ.. ಪೂರಿ ಜಗನ್ನಾಥ್ ನಿರ್ದೇಶನ ವಿಜಯ್ ದೇವರಕೊಂಡ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಆಗಸ್ಟ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಈ ಸಿನಿಮಾ ತಂಡ ಈಗಾಗಲೇ ಪ್ರಚಾರದಲ್ಲೂ ತೊಡಗಿದ್ದು ಇತ್ತೀಚೆಗೆ ವಿಜಯ್ ದೇರಕೊಂಡ ಅವರ ಒಂದು ಹಾಟ್ , ಸೆನ್ಷೇಷನಲ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.. ಈ ಪೋಸ್ಟರ್ ನಲ್ಲಿ ದೇವರಕೊಂಡ ಬೆತ್ತಲಾಗಿ ನಿಂತಿದ್ದು ಗುಲಾಬಿ ಹಿಡಿದಿದ್ದಾರೆ.. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್ ವಲ್ ಎಬ್ಬಿಸಿದೆ..
ಇದೀಗ ಈ ಫೋಟೋವನ್ನ ಇನ್ ಸ್ಟಾದಲ್ಲಿ ಶೇರ್ ಮಾಡಿರುವ ರಶ್ಮಿಕಾ ಇಲ್ಲಿಯವರೆಗೂ ನನ್ನನ್ನ ಯಾರಾದ್ರೂ ನಿನ್ನ ಸ್ಪೂರ್ತಿ ಯಾರು ಎಂದು ಕೇಳಿದ್ರೆ ಯಾರ ಹೆಸರು ಹೇಳಬೇಕೋ ಅರ್ಥವಾಗುತ್ತಿರಲಿಲ್ಲ. ಆದ್ರೆ ಇನ್ಮುಂದೆ ಯಾರಾದ್ರೂ ಆ ಪ್ರಶ್ನೆ ಕೇಳಿದ್ರೆ ನಿನ್ನ ಹೆಸರೇ ಉತ್ತರವಾಗಿ ಹೇಳುತ್ತೇನೆ. ಲೈಗರ್ ನಿಮಗೆ ನಮ್ಮ ಪ್ರೀತಿ, ಬೆಂಬಲ ಸದಾ ಇರುತ್ತದೆ. ನೀನು ಏನು ಮಾಡಬಹುದು ಎಂಬೋದನ್ನ ಪ್ರಪಂಚಕ್ಕೆ ತೋರಿಸು ಅಂತಾ ಬರೆದುಕೊಂಡಿದ್ದಾರೆ.
ಇದಕ್ಕೆ ವಿಜಯ್ ಕೂಡ ಸ್ಪಂದಿಸಿದ್ದು, ರುಷಿ… ಗೀತಾಗೊಂವಿದಂ ಸಿನಿಮಾದಿಂದ ನೀನೇ ನನ್ನ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.