ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹೀರೋ ಆಗಿ ಶಂಕರ್ ನಿರ್ದೇಶನದಲ್ಲಿ ಒಂದು ಸಿನಿಮಾ ಬರುತ್ತಿರೋದು ಗೊತ್ತಿರುವ ವಿಚಾರವೇ.
ದಿಲ್ ರಾಜು ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಸಿನಿಮಾಗೆ ಇಲ್ಲಿಯವರೆಗೂ ವಿಶ್ವಂಭರ, ಸರ್ಕಾರೋಡು ಅನ್ನೋ ಟೈಟಲ್ ಗಳು ಕೇಳಿಸುತ್ತಿವೆ.
ಶಂಕರ್ ಸಿನಿಮಾ ಎಂದರೆ ಹೀರೋಗಳು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ಕ್ರಮದಲ್ಲಿ ಈಗ ಈ ಚಿತ್ರದಲ್ಲಿ ಚರಣ್ ಲುಕ್ ಬಗ್ಗೆ ಕುತೂಹಲ ಮೂಡಿದೆ.
ಇತ್ತೀಚೆಗಷ್ಟೇ ಈ ಚಿತ್ರದಲ್ಲಿನ ಚರಣ್ ಶಾಕಿಂಗ್ ಲುಕ್ ಹೊರಬಿದ್ದಿದೆ.
ಇದು ಚರಣ್ ಮೇಕಪ್ ಮಾಡುತ್ತಿರುವ ವಿಡಿಯೋ ತುಣುಕು.
ಚರಣ್ ಗಡ್ಡ ಮತ್ತು ಉದ್ದನೇಯ ಕೂದಳಿನೊಂದಿಗೆ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ತಮ್ಮ ವೃತ್ತಿ ಜೀವನದಲ್ಲೇ ರಾಮ್ ಚರಣ್ ಅವರು ನಟಿಸುತ್ತಿರುವ ಅತ್ಯಂತ ವಿಭಿನ್ನ ಪಾತ್ರ ಅಂತಲೇ ಹೇಳಬಹುದು…