ತಮಿಳಿನ ಸ್ಟಾರ್ ನಟ ವಿಶಾಲ್ ಅವರು ಲತ್ತಿ ಸಿನಿಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.. ಆಕ್ಷನ್ ಸೀನ್ ನ ಚಿತ್ರೀಕರಿಸುವಾಗ ಅವರಿಗೆ ಗಾಯಗೊಂಡಿದ್ದು ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ..
ಲತ್ತಿಯ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಶಾಲ್ ಕಾಣಿಸಿಕೊಳ್ತಿದ್ದು , ಈ ಸಿನಿಮಾದಲ್ಲಿ ಸಾಕಷ್ಟು ಆಕ್ಷನ್ ಸೀನ್ ಗಳಿರಲಿವೆ.. ಇದೇ ರೀತಿ ಫೈಟ್ ಸೀನ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾಗಲೇ ಇಂಜ್ಯುರಿಯಾಗಿದೆ..
ಸದ್ಯ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಸದ್ಯಕ್ಕೆ ಶೂಟಿಂಗ್ ಸ್ಥಗಿತಗೊಂಡಿದೆ.. ನಟ ಚೇತರಿಸಿಕೊಂಡ ನಂತರವೇ ಮತ್ತೆ ಚಿತ್ರೀಕರಣ ಶುರುವಾಗಲಿದೆ.. ಅಂದ್ಹಾಗೆ ಇದೇನು ಮೊದಲಲ್ಲ ವಿಶಾಲ್ ಪೆಟ್ಟು ತಿಂದಿರುವುದು… ಈ ಹಿಂದೆಯೂ ಕೂಡ ಚಿತ್ರೀಕರಣದಲ್ಲಿ ಗಾಯಗೊಂಡಿದ್ದರು.. ವಿಶಾಲ್ ಗುಣಮುಖರಾದ ಮೇಲೆ ಚಿತ್ರೀಕರಣಕ್ಕೆ ಮರಳಿದ್ದರು..