ಮಾಲಿವುಡ್ ನ ಸ್ಟಾರ್ ನಟ ಫಹಾದ್ ಫಾಸಿಲ್ ಬಹುಭಾಷೆಗಳಲ್ಲಿ ಬಣ್ಣ ಹಚ್ಚಿ ಖ್ಯಾತಿ ಗಳಿಸಿದ್ದಾರೆ.. ಇದೀಗ ಅವರು ಸಜಿಮೋನ್ ಪ್ರಭಾಕರ್ ಅವರ ಮುಂಬರುವ ಸರ್ವೈವಲ್ ಥ್ರಿಲ್ಲರ್ ‘ಮಲಯಂಕುಂಜು’ ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಇನ್ನೂ ಈ ಸಿನಿಮಾ ನೇರ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ..
ಫಹದ್ ಫಾಸಿಲ್ ಅಭಿನಯದ ಚಿತ್ರದ ಥಿಯೇಟ್ರಿಕಲ್ ರಿಲೀಸ್ ಬಗ್ಗೆ ತಯಾರಾಕರು ಯಾವುದೇ ಅಧಿಕೃತ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ.. ಓಣಂ ಸಂದರ್ಭದಲ್ಲಿ ಜನಪ್ರಿಯ OTT ಪ್ಲಾಟ್ಫಾರ್ಮ್ ಮೂಲಕ ‘ಮಲಯಂಕುಂಜು’ ಸ್ಟ್ರೀಮ್ ಆಗಲಿದೆ ಎಂದು ಹೇಳಲಾಗ್ತಿದೆ.
ಸಜಿಮೋನ್ ಪ್ರಭಾಕರ್ ಅವರ ನೇತೃತ್ವದಲ್ಲಿ, ‘ಮಲಯಂಕುಂಜು ಅವರ ಚಿತ್ರಕಥೆಯನ್ನು ಹೆಸರಾಂತ ನಿರ್ದೇಶಕ ಮಹೇಶ್ ನಾರಾಯಣನ್ ಬರೆದಿದ್ದಾರೆ..
‘ಮಲಯಂಕುಂಜು’ ಚಿತ್ರದ ಪ್ರಮುಖ ಹೈಲೈಟ್ಗಳಲ್ಲಿ ಒಂದೆಂದರೆ, ಫಹದ್ ಫಾಸಿಲ್ ಅಭಿನಯದ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಮೆಸ್ಟ್ರೋ ಸಂಗೀತಗಾರ ಎಆರ್ ರೆಹಮಾನ್ ಅವರನ್ನು ನೇಮಿಸಿಕೊಳ್ಳಲಾಗಿದೆ.
ಫಹದ್ ಫಾಸಿಲ್ ಅಲ್ಲದೆ, ‘ಮಲಯಂಕುಂಜು’ ಚಿತ್ರದಲ್ಲಿ ರಜಿಶಾ ವಿಜಯನ್, ಇಂದ್ರನ್ಸ್, ಜಯ ಕುರುಪ್, ಜಾಫರ್ ಇಡುಕ್ಕಿ, ದೀಪಕ್ ಪರಂಬೋಲ್, ಜಾನಿ ಆಂಟೋನಿ ಮತ್ತು ಶ್ಯಾಮಪ್ರಸಾದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.