ಸಾಕ್ಷ್ಯ ಚಿತ್ರಗಳಲ್ಲಿ ದೇವಿ ಕಾಳಿ ಮಾತೆ ಕೈಯಲ್ಲಿ ಸಿಗರೇಟ್ ಮತ್ತು LGBTQ ಧ್ವಜ ಕೊಟ್ಟಿದ್ದ ಕಾರಣಕ್ಕಾಗಿ ತಮಿಳಿನ ಸ್ಟಾರ್ ನಿರ್ಮಾಪಕಿ ಲೀನಾ ಮಣಿಮೇಕಲೈ(leena Manimekalai) ವಿರುದ್ಧ ಇದೀಗ ಆಕ್ರೋಶ ಭುಗಿಲೆದ್ದಿದೆ..
ಹಿಂದೂ ಬಾವನೆಗಳಿಗೆ ಧಕ್ಕೆ ತಂದಿರುವ ಕಾರಣಕ್ಕೆ ಲೀನಾ (leena Manimekalai) ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ.. ದೆಹಲಿಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.. ಇತ್ತ ಬೆಂಗಳೂರಿನಲ್ಲೂ ಕಿರಣ್ ಆರಾಧ್ಯ ಎನ್ನುವವರು ಸೈಬರ್ ಕ್ರೈಂಗೆ ಈ ಸಂಬಂಧ ದೂರು ನೀಡಿದ್ದಾರೆ.
ಲೀನಾ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಲೀನಾ ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ.
ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೇಸ್ಟಿವಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.. ಅಲ್ಲದೇ ಆ ಸಾಕ್ಷ್ಯ ಚಿತ್ರವನ್ನು ನಿಷೇಧಿಸುವಂತೆಯೂ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಟ್ಯಾಗ್ ಮಾಡಿ ಟ್ವಿಟ್ಟರ್ ಬಳಕೆದಾರರು ಆಗ್ರಹಿಸಿದ್ದಾರೆ.
https://twitter.com/LeenaManimekali/status/1543200394477805568?ref_src=twsrc%5Etfw%7Ctwcamp%5Etweetembed%7Ctwterm%5E1543200394477805568%7Ctwgr%5E%7Ctwcon%5Es1_&ref_url=https%3A%2F%2Fsaakshatv.com%2Fkaali-leena-documentary-controvercy%2F