ಕಮಲ್ ಹಾಸನ್ ಅವರ ನಟನೆಯ ವಿಕ್ರಮ್ ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ..ಜೂನ್ 3 ರಂದು ರಿಲೀಸ್ ಆಗಿದ್ದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿದೆ.. ಸಿನಿಮಾ ಸಕ್ಸಸ್ ನ ಸಂಭ್ರಮದಲ್ಲಿರುವಾಗಲೇ ನಟ ಕಮಲ್ ಹಾಸನ್ ಅವರಿಗೆ ನೋಟೀಸ್ ಒಂದು ಬಂದಿದೆ..
ಹೌದು..! ಕಮಲ್ ಹಾಸನ್ ಮನೆಯನ್ನು ತಮಿಳುನಾಡು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ..
ಇದಕ್ಕಾಗಿಯೇ ತಮಿಳುನಾಡು ಸರ್ಕಾರ ಕಮಲ್ ಹಾಸನ್ ಅವರಿಗೆ ಬ್ಯಾಕ್ ಟು ಬ್ಯಾಕ್ ನೋಟೀಸ್ ನೀಡಿದೆ ಎಂದು ಕಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ.. ಪ್ರಸ್ತುತ ಚೆನ್ನೈನಲ್ಲಿ ಎರಡನೇ ಭಾಗದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.. ಇದರ ಭಾಗವಾಗಿ ಅಲ್ವಾರ್ ಪೇಟೆ ಸ್ಟೇಷನ್ ಕಮಲ್ ಹಾಸನ್ ನಿವಾಸದ ಬಳಿಯಿಂದಲೇ ಸಾಗಲಿದೆ. ಈ ಸ್ಟೇಷನ್ ನಿರ್ಮಾಣಕ್ಕಾಗಿ ಕಮಲ್ ಭವನದಲ್ಲಿ 170 ಚದರ ಅಡಿಗಳು ಬೇಕಾಗಿದೆ. ಈ ಜಾಗಕ್ಕಾಗಿ ಕಮಲ್ ಗೆ ಸರಕಾರ ನೋಟಿಸ್ ನೀಡಿದೆ ಎನ್ನಲಾಗ್ತಿದೆ…