ಪ್ರೇಮಂ ಸಿನಿಮಾ ಮೂಲಕ ಇಂಡಸ್ಟ್ರರಿಗೆ ಪಾದಾರ್ಪಣೆ ಮಾಡಿದ ಡ್ಯಾನ್ಸಿಂಗ್ ಕ್ವೀನ್ ಸಾಯಿ ಪಲ್ಲವಿಗೆ ದೊಡ್ಡ ಫ್ಯಾಂಡಮ್ ಇದೆ… ಗಾರ್ಗಿ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದು , ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ..
ಈ ಸಿನಿಮಾವನ್ನು ಕನ್ನಡದಲ್ಲಿ ನಟ ರಕ್ಷಿತ್ ಶೆಟ್ಟಿ ತಮ್ಮ ಪರಮವ್ಹ ಸ್ಟುಡಿಯೋಸ್ ಮೂಲಕ ಪ್ರಸ್ತುತಿಪಡಿಸಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸಹ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.
ಗಾರ್ಗಿ ಸಿನಿಮಾದ ನಿರ್ದೇಶಕರಾದ ಗೌತಮ್ ಅವರು ರಕ್ಷಿತ್ ಶೆಟ್ಟಿ ಅವರ ಒಳ್ಳೆಯ ಸ್ನೇಹಿತರಾಗಿದ್ದಾರೆ. ನಾನು ಅವರು ಭೇಟಿಯಾದಾಗಲೆಲ್ಲ ಕತೆಗಳ ಬಗ್ಗೆ ಸಿನಿಮಾಗಳ ಬಗ್ಗೆಯೇ ಮಾತನಾಡುತ್ತಿದ್ದೆವು. ಗೌತಮ್ ಗೆ ಸಿನಿಮಾದ ಬಗ್ಗೆ ಇರುವ ಪ್ರೇಮ ಮತ್ತು ‘ಗಾರ್ಗಿ’ ಸಿನಿಮಾ ಮೂಡಿಬಂದಿರುವ ರೀತಿ ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಟಿಸಿರುವುದು ಸಹ ಬಲವಾದ ಕಾರಣವೇ ಎನ್ನಬಹುದು. ಜೊತೆಗೆ ಸಿನಿಮಾವನ್ನು ವೀಕ್ಷಿಸಿದ ಬಳಿಕವಂತೂ ಈ ಸಿನಿಮಾವನ್ನು ಪ್ರಸ್ತುತ ಪಡಿಸಲು ನನಗೆ ಸಾವಿರ ಕಾರಣಗಳು ಸಿಕ್ಕವು ಎಂದಿದ್ದಾರೆ..
ಅಲ್ಲದೇ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಳಿಕ, ಹೃದಯ ಕದಲಿಸಿದ ಸಿನಿಮಾ ಎಂದರೆ ಗಾರ್ಗಿ ಎಂದರೆ ತಪ್ಪಾಗಲಾರದು. ಈ ಸಿನಿಮಾವು ನಿಮ್ಮನ್ನು ಗಾರ್ಗಿಯ ಪ್ರಪಂಚೊದಳಕ್ಕೆ ಸೆಳೆದು, ಅವಳ ಧೈರ್ಯ ಮತ್ತು ಹೋರಾಟದ ನಡುವೆ ಮನಕಲಕುವ ದೃಶ್ಯಗಳು ಮತ್ತು ಅವನ್ನು ಗೌತಮ್ ನಿರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸಾಯಿ ಪಲ್ಲವಿ ‘ಗಾರ್ಗಿ’ ಪಾತ್ರವನ್ನು ಜೀವಿಸಿ ನಿಜ ಜೀವನಕ್ಕೆ ಹತ್ತಿರವಾಗಿರುವಂತೆ ಮಾಡಿದ್ದಾರೆ. ಕಾಳಿ ವೆಂಕಟ್ ಇಂದ್ರ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ..