ಲಂಡನ್ನ ಪಾಲ್ ಮಾಲ್ ಸ್ಟ್ರೀಟ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ನಲ್ಲಿ ನಡೆದ ಹಿಂದೂಜಾಸ್ ಮತ್ತು ಬಾಲಿವುಡ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ ನಟ ಅಕ್ಷಯ್ ಕುಮಾರ್ ಅವರಿಗೆ ರಾಜಕೀಯಕ್ಕೆ ಸೇರುವ ವಿಚಾರವಾಗಿ ಪ್ರಶ್ನೆ ಕೇಳಲಾಗಿದೆ.. ಈ ವೇಳೆ ಅಕ್ಷಯ್ ಕುಮಾರ್ ಅವರು ಸಿನಿಮಾಗಳನ್ನ ಮಾಡುವುದರಿಂದ “ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
ಆದ್ರೆ ರಾಜಕೀಯಕ್ಕೆ ಸೇರಲ್ಲ ಎಂದೇನೂ ಹೇಳಿಲ್ಲ..
2019 ರಲ್ಲಿ, ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಾಗ ನಟನಿಗೆ ಅದೇ ಪ್ರಶ್ನೆಯನ್ನು ಕೇಳಲಾಯಿತು.
ಮತ್ತು ಅವರು ಆಗ “ಎಂದಿಗೂ, ನಾನು ಸಂತೋಷವಾಗಿರಲು ಬಯಸುತ್ತೇನೆ. ನಾನು ಚಲನಚಿತ್ರಗಳನ್ನು ಪ್ರೀತಿಸುತ್ತೇನೆ ಮತ್ತು ನನ್ನ ಚಲನಚಿತ್ರಗಳ ಮೂಲಕ ನನ್ನ ದೇಶಕ್ಕೆ ಕೊಡುಗೆ ನೀಡುತ್ತೇನೆ. ಇದು ನನ್ನ ಕೆಲಸ ಎಂದಿದ್ದರು..
ನಾನು ಚಲನಚಿತ್ರಗಳನ್ನು ಮಾಡುವುದರಲ್ಲಿ ತುಂಬಾ ಸಂತೋಷವಾಗಿದ್ದೇನೆ … ಒಬ್ಬ ನಟನಾಗಿ, ನಾನು ಸಾಮಾಜಿಕ ಸಮಸ್ಯೆಗಳನ್ನು ತೆಗೆದುಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ.. ನಾನು 150 ಚಲನಚಿತ್ರಗಳನ್ನು ಮಾಡಿದ್ದೇನೆ.. ನನ್ನ ಹೃದಯಕ್ಕೆ ಹತ್ತಿರವಾದ ಒಂದು ಸಿನಿಮಾ ರಕ್ಷಾ ಬಂಧನ. ನಾನು ವಾಣಿಜ್ಯ ಚಿತ್ರಗಳನ್ನು ನಿರ್ಮಿಸುತ್ತೇನೆ, ಕೆಲವೊಮ್ಮೆ ಸಾಮಾಜಿಕ ಸಮಸ್ಯೆಗಳ ಸಿನಿಮಾ ನಿರ್ಮಿಸುತ್ತೇನೆ. ನಾನು ವರ್ಷಕ್ಕೆ ಮೂರು-ನಾಲ್ಕು ಚಿತ್ರಗಳನ್ನು ನಿರ್ಮಿಸುತ್ತೇನೆ, “ಎಂದು ಅವರು ಹೇಳಿದರು.