ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನ ಇತ್ತೀಚೆಗೆ ದುಷ್ಕರ್ಮಿಗಳು ಚಾಕುವಿನಿಂದ ಮನಸೋಇಚ್ಛೆ ಇರಿದು ಬರ್ಬರವಾಗಿ ಹತ್ಯೆಗೈದಿದ್ದು , ಪ್ರಕರಣದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.. ಈ ಪ್ರಕರಣ ಜನರನ್ನ ಬೆಚ್ಚಿ ಬೀಳಿಸಿದೆ..
ಪ್ರಕರಣದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ಧಾರೆ,.. ಇದೀಗ ಆದ್ಯಾತ್ಮಿಕತೆ ಜ್ಯೋತಿಷ್ಯಗಳಲ್ಲಿ ಹೆಚ್ಚು ನಂಬಿಕೆಯಿಟ್ಟುಕೊಂಡಿರುವ ನಟ , ರಾಜಕಾರಣಿ ಜಗ್ಗೇಶ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ…
ಅವರ ಟ್ವೀಟ್ ಹೀಗಿದೆ..
“ ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಆಧ್ಯಾತ್ಮಿಕ ಹಾಗು ವಾಸ್ತು ಸಂಬಂಧಿಸಿದ್ದು, ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮವಾಗಿತ್ತು. ನಾವಿಬ್ಬರು ಮಾತಿಗೆ ಕೂತರೆ ಘಂಟೆಗಟ್ಟಲೆ ಮಾತನಾಡುತ್ತಿದ್ದೆವು, ನನ್ನ ರಾಜ್ಯಸಭೆ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನ ನಂಬುವುದು ಕಷ್ಟ “ ಎಂದು ಟ್ವೀಟ್ ಮಾಡಿದ್ದಾರೆ..
ನನ್ನ ಆತ್ಮೀಯ ಸ್ನೇಹಿತರು
ನನ್ನ ಅವರ ಒಡನಾಟ ಆಧ್ಯಾತ್ಮಿಕ
ಹಾಗು ವಾಸ್ತು ಸಂಬಂಧಿಸಿದ್ದು.
ಸದ ನನ್ನಒಳಿತು ಬಯಸುತ್ತಿದ್ದ ಆತ್ಮ.ನಾವಿಬ್ಬರು ಮಾತಿಗೆ ಕೂತರೆ ಘಂಟೆಗಟ್ಟಲೆ.ನನ್ನ ರಾಜ್ಯಸಭೆ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು.ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ.ಇಂದಿನ ಕಾಲದಲ್ಲಿ ಯಾರನ್ನ ನಂಬುವುದು.RIP pic.twitter.com/fukOGlFtW4— ನವರಸನಾಯಕ ಜಗ್ಗೇಶ್ (@Jaggesh2) July 5, 2022