10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು.. ಅವರ ಆಸೆ ಕನಸಿಗೆ ಈಗ ತಣ್ಣೀರೆರೆಚುವಂತಹ ಸುದ್ದಿಯೊಂದು ಹರಿದಾಡ್ತಿದೆ.. ಅದೇ ಸಮಂತ ಜೊತೆಗೆ ಡಿವೋರ್ಸ್ ಪಡೆದ ಬಳಿ ನಟ ನಾಗ್ ಚೈತನ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆಂದು ನಟಿ ಶೋಭಿತಾ ಧೂಳಿಪಾಲ ಜೊತೆ ಡೇಟಿಂಗ್ ನಲ್ಲಿದಾರೆ ಎಂಬ ಸುದ್ದಿ.. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಾನು ಯಾವುದೇ ವಿಷಯವನ್ನಾದ್ರೂ ನೇರವಾಗಿ ಹೇಳುತ್ತೇನೆ. ಡಬಲ್ ಮೀನಿಂಗ್ ಆಗಿ ಮಾತನಾಡಲು ನನಗೆ ಬರೋದಿಲ್ಲ ಎಂದು ನಾಗಚೈತನ್ಯ ಹೇಳಿದ್ದಾರೆ.
ಸದ್ಯ ನಾಗ ಚೈತನ್ಯ ಅವರು ಈ ಬಾರಿ ಡಬಲ್ ಮೀನಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ..
ಚೇತು ಮತ್ತು ರಾಶಿಕನ್ನಾ ಜೋಡಿಯಾಗಿ ನಟಿಸಿರುವ ಸಿನಿಮಾ ಥ್ಯಾಂಕ್ಯೂ.
ವಿಕ್ರಂ ಕೆ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಮಾಳವಿಕಾ ನಾಯರ್, ಅವಕಾ ಗೋರ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಜುಲೈ 22 ಎಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಈ ಸಿನಿಮಾದ ಪ್ರಮೋಷನ್ ಭಾಗವಾಗಿ ನಟ ನಾಗಚೈತನ್ಯ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಈ ವೇಳೆ ರ್ಯಾಪಿಡ್ ಪ್ರಶ್ನೆಗಳಲ್ಲಿ ಐದು ಡಬಲ್ ಮಿನಿಂಗ್ ಪದಗಳನ್ನು ಹೇಳುವಂತೆ ಆಂಕರ್ಸ್ ಕೇಳಿದ್ರು.
ಇದಕ್ಕೆ ಚೇತು ತಮ್ಮದೇಯಾದ ಶೈಲಿಯಲ್ಲಿ ಸಮಾಧಾನ ನೀಡಿದರು. ನನಗೆ ಡಬಲ್ ಮೀನಿಂಗ್ ಪದಗಳು ಬರೋದಿಲ್ಲ.
ಯಾವುದೇ ವಿಷಯ ಇದ್ದರೂ ನೇರವಾಗಿ ಹೇಳುತ್ತೇನೆ ಎಂದರು.
ಅಷ್ಟೆ ಅಲ್ಲದೇ ಡಬಲ್ ಮಿನಿಂಗ್ ಪದಗಳು ಏನಂದರೇ ಅಂತಾ ನೀನೇ ಹೇಳಬೇಕು ಅಂತಾ ಆಂಕರ್ಸ್ ಗೆ ಮರುಪ್ರಶ್ನೆ ಕೇಳಿದರು.
ದಿಲ್ ರಾಜು, ಶಿರಿಷ್ ನಿರ್ಮಿಸಿರುವ ಈ ಸಿನಿಮಾಗೆ ತಮನ್ ಸಂಗೀತ ನೀಡಿದ್ದಾರೆ.