Ponniyin Selvan 1
ಹೆಸರಾಂತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಬಹುನಿರೀಕ್ಷೆಯ ‘ಪೊನ್ನಿಯಿನ್ ಸೆಲ್ವನ್: 1’ (PS-1) ಸಿನಿಮಾದಲ್ಲಿ ಬಹುಭಾಷೆಯ ಮಲ್ಟಿ ಸ್ಟಾರ್ ಗಳಿದ್ದು ಸಿನಿಮಾ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.. ಜೊತೆಗೆ ಬಾಹುಬಲಿ , ಪುಷ್ಪ , KGF ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ…
ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.. ‘ ಚೋಳರು ಬರುತ್ತಿದ್ದಾರೆ! ( The Cholas Coming )” ಎಂಬ ಅಡಿಬರಹದೊಂದಿಗೆ ಅನಾವರಣಗೊಳಿಸಲಾಗಿದೆ..
ಇದೀಗ ಈ ಸಿನಿಮಾದಲ್ಲಿ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ವಿಕ್ರಮ್ ನಟಿಸಲಿದ್ದಾರೆ ಎಂದು ಚಿತ್ರತಂಡ ಪ್ರಕಟಿಸಿದೆ.
ಹಾಗೆಯೇ ‘ಚೋಳ ಕಿರಟ ರಾಜು. ಭಯಂಕರ ಯುದ್ಧ ವೀರ, ‘ದಿ ವೈಲ್ಡ್ ಟೈಗರ್’ ಎನ್ನುತ್ತಾ ವಿಕ್ರಂ ಅವರ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
‘ಪೊನ್ನಿಯಿನ್ಸೆಲ್ವನ್’ ಚಿತ್ರದ ಮೊದಲ ಭಾಗ ಇದೇ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಶರತ್ಕುಮಾರ್, ಪ್ರಭು, ಪಾರ್ತಿಬನ್, ಪ್ರಕಾಶ್ರಾಜ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
ಹತ್ತನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದಲ್ಲಿ ನಡೆದ ಕೆಲವು ಘಟನೆಗಳ ಸಂಕಲನವೇ ‘ಪೊನ್ನಿನ್ಸೆಲ್ವನ್’ ಚಿತ್ರ.
ಖ್ಯಾತ ಬರಹಗಾರ ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯಿಂಸೆಲ್ವನ್’ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.
ಮಣಿರತ್ನಂ ನಿರ್ದೇಶನದಲ್ಲಿ ವಿಕ್ರಮ್, ‘ಜಯಂ’ ರವಿ, ಕಾರ್ತಿ, ಐಶ್ವರ್ಯ ರೈ, ತ್ರಿಷಾ ಮತ್ತು ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.