Pruthviraj sukumaran : ಕೊನೆಗೂ ರಿಲೀಸ್ ದಿನಾಂಕ ಘೋಷಣೆ ಮಾಡಿದ ‘ಕಡುವ’ ಟೀಮ್
ಅನೇಕ ಅಡಚಣೆಗಳ ನಂತರ, ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ – ಶಾಜಿ ಕೈಲಾಸ್ ಅವರ ಆಕ್ಷನ್ ಎಂಟರ್ಟೈನರ್ ಸಿನಿಮಾ ಕುಡುವ ಅಂತಿಮವಾಗಿ ಸೆನ್ಸಾರ್ ಮಂಡಳಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ ಮತ್ತು ಯು/ಎ ಪ್ರಮಾಣಪತ್ರವನ್ನು ಪಡೆದಿದೆ. ಜುಲೈ 7 ರಂದು ಚಿತ್ರ ತೆರೆಗೆ ಬರಲಿದೆ.
ಪೃಥ್ವಿರಾಜ್ ಸುಕುಮಾರನ್ ತಮ್ಮ ಅಧಿಕೃತ ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ಧಾರೆ.. ಚಲನಚಿತ್ರವನ್ನು ಹಿಟ್ ಮೇಕರ್ ಶಾಜಿ ಕೈಲಾಸ್ ನಿರ್ದೇಶಿಸಿದ್ದಾರೆ ..
ಈ ಹಿಂದೆ ‘ಕಡುವ’ ಜೂನ್ 30 ರಂದು ದೊಡ್ಡ ಪರದೆಯ ಮೇಲೆ ಬರಲಿದೆ ಎನ್ನಲಾಗಿತ್ತು.. ಆದ್ರೆ ಕೆಲ ಕಾನೂನು ಸಮಸ್ಯೆಗಳಿಂದಾಗಿ ಸಿನಿಮಾ ದಿನಾಂಕ ಮುಂದೂಡಲಾಯ್ತು..
ಜೋಸ್ ಕುರುವಿನಕ್ಕುನ್ನೆಲ್ ಅವರು ತಮ್ಮ ನೈಜ ಜೀವನವನ್ನು ಆಧರಿಸಿದ ಕಥೆಯನ್ನು ಈ ಸಿನಿಮಾ ಆಧರಿಸಿದೆ ಎಂದು ಆರೋಪಿಸಿ ನಿರ್ಮಾಪಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.
ಈಗ ಚಿತ್ರವು ಅಂತಿಮವಾಗಿ ಎಲ್ಲಾ ಕಾನೂನು ಸಮಸ್ಯೆಗಳನ್ನ ಬಗೆಹರಿಸಿಕೊಂಡು ರಿಲೀಸ್ ಗೆ ರೆಡಿಯಾಗಿದೆ..