Rangitaranga : ಹಿಟ್ ಸಿನಿಮಾ ರಂಗಿತರಂಗ ಹಿಂದಿಗೆ ರಿಮೇಕ್..!!! ನಾಯಕ ಯಾರು..?? ಅಕ್ಷಯ್ ಅಥವ ಶಾಹಿದ್..??
ಕರಾವಳಿ ಭಾಗದ ಸಂಸ್ಕೃತಿಯನ್ನ ಬಹಳ ಅಬ್ಧುತವಾಗಿ ತೋರಿಸಿದ್ದ ಕನ್ನಡದ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ರಂಗಿತರಂಗ ಸಿನಿಮಾ ರಿಲೀಸ್ ಆಗಿ 7 ವರ್ಷಗಳೇ ಕಳೆದುಹೋಗಿದೆ.. ಈ ಸಿನಿಮಾ ಆಗ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು.. ಇದು ಅನೂಪ್ ಭಂಡಾರಿ ನಿರ್ದೇಶನದ ಮೊದಲ ಸಿನಿಮಾವಾಗಿತ್ತು.. ಸಿನಿಮಾ ಸೂಪರ್ ಹಿಟ್ ಆಗಿತ್ತು.. ವಿಶ್ವಾದ್ಯಂತ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು..
ಅಂದ್ಹಾಗೆ ಸೌತ್ ಸಿನಿಮಾಗಳನ್ನೇ ಕಾಪಿ ಮಾಡುತ್ತಾ ಹೇಗೋ ಬಾಲಿವುಡ್ ನ ಹೆಸರರು ಉಳಿಸಿಕೊಳ್ತಿರೋ ಸೋ ಕಾಲ್ಡ್ ಕಾಪಿವುಡ್ ಅಲ್ಲಲ್ಲ ಬಾಲಿವುಡ್ ಈಗ ರಂಗಿತರಂಗ ಸಿನಿಮಾವನ್ನ ರೀಮೇಕ್ ಮಾಡಲು ಹೊರಟಿದೆ..
ಹೌದು..! 2015 ರಲ್ಲಿ ಬಿಡುಗಡೆ ಆಗಿದ್ದ ರಂಗಿತರಂಗ ಸಿನಿಮಾವನ್ನ ಹಿಂದಿಯಲ್ಲಿ ರೀಮೇಕ್ ಮಾಡಲಾಗ್ತಿದ್ದು , ಈ ಸಿನಿಮಾಗಾಗಿ ಇಬ್ಬರು ಸ್ಟಾರ್ ನಟರ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ..
ವಿಶೇಷ ಅಂದ್ರೆ ಈ ಸಿನಿಮಾದ ಹಿಂದಿ ಆವೃತ್ತಿಗೆ ಅನೂಪ್ ಭಂಡಾರಿಯವರೇ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ.. ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ.
ಅಂದ್ಹಾಗೆ ರಂಗಿತರಂಗ ಸಿನಿಮಾ ಜುಲೈ 3 ರಂದು ಏಳನೇ ವರ್ಷಕ್ಕೆ ಕಾಲಿಟ್ಟಿದೆ. ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ದೊಡ್ಡ ನಿರ್ಮಾಪಕರೊಬ್ಬರು ಉತ್ಸುಕರಾಗಿದ್ದಾರೆ ಮತ್ತು ಮುಂಬೈನ ದೊಡ್ಡ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ..
ರಂಗಿತರಂಗದಲ್ಲಿ ಅನುಪ್ ಭಂಡಾರಿ ಅವರ ಸಹೋದರ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಅವರ ಅಭಿನಯದ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದರು ಮತ್ತು ಸಾಯಿ ಕುಮಾರ್ ಅವರು ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದರು. ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಅನುಪ್ ಭಂಡಾರಿ ಪ್ರಸ್ತುತ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಮುಂದೆ ಅವರು ಸುದೀಪ್ ಅವರ ಜೊತೆಗೆ ಬಿಲ್ಲಾ ರಂಗ ಬಾಷಾ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.. ಆ ನಂತರವೇ ರಂಗಿತರಂಗ ಕೈಗೆತತ್ತುಕೊಳ್ಳುವ ಸಾಧ್ಯತೆಯಿದೆ..