urfi javed
ಉರ್ಫಿ ಜಾವೇದ್ ಮತ್ತು ಬೋಲ್ಡ್ ವಿಲಕ್ಷಣ ಫ್ಯಾಷನ್ ಆಯ್ಕೆಗಳು ನೆಟಿಜನ್‌ಗಳಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿದೆ.. ವರ್ಸ್ಟ್ ಫ್ಯಾಷನ್ ಅಂತ ಬಂದ್ರೆ ಪಟ್ಟಿಯಲ್ಲಿ ಪ್ರಸ್ತುತ ಫಸ್ಟ್ ಪ್ಲೇಸ್ ಇವರೀಗೇನೇ.. ಇವರ ಫ್ಯಾಷನ್ ಸೆನ್ಸ್ ಸಾಕಷ್ಟು ಕುಖ್ಯಾತವಾಗಿವೆ.
ಉರ್ಫಿ ಜಾವೇದ್ ಅವರು ತಮ್ಮ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.. ಬಿಗ್ ಬಾಸ್ ಹಿಂದಿ OTT ಖ್ಯಾತಿಯ ಇವರು Instagram ನಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿರುತ್ತಾರೆ… ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಗಮನ ಸೆಳೆಯುತ್ತಾರೆ.. ಮೈತುಂಬಾ ಅಥವ ಡೀಸೆಂಟ್ ಬಟ್ಟೆ ಹಾಕೋದು ಅಪರೂಪ ಅನ್ನೋಕಿಂತ ನೋ ಹಾಕೋದೇ ಇಲ್ಲ ಅನ್ನೋ ರೇಂಜ್ ಗೆ ಇರುತ್ತೆ ಅವರ ಫ್ಯಾಷನ್..
ಉರ್ಫಿ ಜಾವೇದ್ ಅವರು ತಮ್ಮ ವಿಶಿಷ್ಟ ಡ್ರೆಸ್ಸಿಂಗ್ ಸೆನ್ಸ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಉರ್ಫಿ ಹೆಸರು ತೆಗೆದ ತಕ್ಷಣ ಅಲ್ಟ್ರಾ ಮಾಡರ್ನ್ ಹುಡುಗಿಯ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೋಲ್ಡ್ ನಟಿ ಉರ್ಫಿ ತನ್ನ ಹೊಸ ಫ್ಯಾಷನ್ ಶೈಲಿಯ ಮೂಲಕ ಜನರನ್ನು ಅಚ್ಚರಿಗೊಳಿಸುತ್ತಲೇ ಇರುತ್ತಾರೆ.
ತನ್ನ ಗ್ಲಾಮರಸ್ ಸ್ಟೈಲ್‌ನಿಂದ ಹೆಡ್‌ಲೈನ್‌ನಲ್ಲಿರುವ ಉರ್ಫಿ, ಬಿಗ್ ಬಾಸ್ OTT ನಂತರ ಜನಪ್ರಿಯತೆಯನ್ನು ಗಳಿಸಿದ್ದಾರೆ. ವಿಶಿಷ್ಟವಾದ ಫ್ಯಾಷನ್ ಶೈಲಿಯಿಂದಾಗಿ ಇಂದು ನಮಗೆ ತಿಳಿದಿರುವ ಉರ್ಫಿ ಕಿರುತೆರೆ ಧಾರಾವಾಹಿಯಲ್ಲಿ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ. ಆ ಧಾರಾವಾಹಿಯಲ್ಲಿ ಉರ್ಫಿಯನ್ನ ನೋಡಿ ಈಗಿನ ಸೋಷಿಯಲ್ ಮೀಡಿಯಾ ಸೆನ್ಷೇಷನ್ ಉರ್ಫಿಯನ್ನ ನೋಡಿದ್ರೆ ಒಂದ್ ಕ್ಷಣ ಶಾಕ್ ಆಗುತ್ತೆ..
ಉರ್ಫಿ ಟಿವಿಯಲ್ಲಿ ಸುಸಂಸ್ಕೃತ ಸೊಸೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಏ ಮೇರೆ ಹಮ್ಸಾಫರ್’ ಎಂಬ ಟಿವಿ ಶೋನಲ್ಲಿ ಅವರನ್ನು ನೀವು ನೋಡಿದರೆ ದಂಗಾಗ್ತೀರಾ.. ಈ ಶೋನಲ್ಲಿ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉರ್ಫಿ ಫುಲ್ ಬಟ್ಟೆಯಲ್ಲಿ ಬಿಂದಿ, ಬಳೆ ತೊಟ್ಟಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಉರ್ಫಿ ತನ್ನ ಡ್ರೆಸ್ಸೇಜ್ ನಿಂದಾಗಿ ಆಗಾಗ್ಗೆ ಟ್ರೋಲ್ಗೆ ಒಳಗಾಗುತ್ತಾರೆ.. ಅಂತಹ ಪರಿಸ್ಥಿತಿಯಲ್ಲಿ, ನಟಿಯ ಈ ರೂಪವನ್ನು ಕಲ್ಪಿಸಿಕೊಳ್ಳುವುದು ಕಷ್ಟ.
ಉರ್ಫಿ ಜಾವೇದ್ ಅನೇಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.
ಉರ್ಫಿ ಜಾವೇದ್ ಅವರು ‘ ಬಿಗ್ ಬಾಸ್ ಒಟಿಟಿ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳೋ ಮೊದಲು ಅನೇಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಉರ್ಫಿ ‘ಬಡೆ ಭಯ್ಯಾ ಕಿ ದುಲ್ಹನಿಯಾ’, ‘ಮೇರಿ ದುರ್ಗಾ’, ‘ಸಾತ್ ಫೆರೆ ಕಿ ಹೇರಾ ಫೇರಿ’, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ‘ಕಸೌತಿ ಜಿಂದಗಿ ಕಿ’, ‘ದಯಾನ್’, ‘ಜಿಜಿ ಮಾ’ ಮುಂತಾದ ಅನೇಕ ಧಾರಾವಾಹಿಗಳ ಭಾಗವಾಗಿದ್ದಾರೆ.