ಮದ್ರಾಸ್ ಟಾಕೀಸ್ ಜೊತೆಗೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸಿರುವ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.. ‘ ಚೋಳರು ಬರುತ್ತಿದ್ದಾರೆ! ( The Cholas Coming )” ಎಂಬ ಅಡಿಬರಹದೊಂದಿಗೆ ಅನಾವರಣಗೊಳಿಸಲಾಗಿದೆ.. ಅಲ್ಲದೇಆದಿತ್ಯ ಕರಿಕಾಳನ್ ಪಾತ್ರದಲ್ಲಿ ನಟಿಸುತ್ತಿರುವ ವಿಕ್ರಮ್ ಫಸ್ಟ್ ಲುಕ್ ಸಹ ರಿಲೀಸ್ ಆಗಿತ್ತು.. ಈಗ ನಟಿ ಐಶ್ವರ್ಯ ಅವರ ಲುಕ್ ರಿಲೀಸ್ ಆಗಿದೆ..
ಭಿನ್ನ ಪಾತ್ರದಲ್ಲಿ ಐಶ್ವರ್ಯ ರೈ ಕಾಣಿಸಿಕೊಳ್ತಿದ್ದಾರೆ. ನಂದಿನಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ಜನಪ್ರಿಯ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧರಿಸಿ `ಪೊನ್ನಿಯನ್ ಸೆಲ್ವನ್’ ಚಿತ್ರ ಮಾಡಲಾಗಿದೆ.
ಈ ವರ್ಷ ಸೆಪ್ಟೆಂಬರ್ 30 ರಂದು ‘ಪೊನ್ನಿಯನ್ ಸೆಲ್ವನ್’ ಭಾಗ 1 ಅನ್ನು ಬಿಡುಗಡೆ ರಿಲೀಸ್ ಆಗಲಿದೆ.
ಹೆಸರಾಂತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಬಹುನಿರೀಕ್ಷೆಯ ‘ಪೊನ್ನಿಯಿನ್ ಸೆಲ್ವನ್: 1’ (PS-1) ಸಿನಿಮಾದಲ್ಲಿ ಬಹುಭಾಷೆಯ ಮಲ್ಟಿ ಸ್ಟಾರ್ ಗಳಿದ್ದು ಸಿನಿಮಾ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.. ಜೊತೆಗೆ ಬಾಹುಬಲಿ , ಪುಷ್ಪ , KGF ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ…