ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಅಂಡರ್ ವರ್ಲ್ಡ್ ಗ್ಯಾಂಗ್ ಒಂದು ಕೊಲೆ ಬೆದರಿಕೆ ಹಾಕಿತ್ತು.. ಇದೀಗ
ಇದೀಗ ಅವರ ಲಾಯರ್ ಗೆ ಕೊಲೆ ಬೆದರಿಕೆ ಬಂದಿದೆ..
ಸಲ್ಲುಗೆ ಬೆದರಿಕೆ ಬಂದ ಹಿನ್ನೆಲೆ ಅವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಇದೀಗ ಅವರ ವಕೀಲರಿಗೆ ಜೀವ ಬೆದರಿಕೆ ಹಾಕಲಾಗಿದೆ.ಪಾತಾಕಿ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯರು ಸಲ್ಮಾನ್ ಖಾನ್ ವಕೀಲರಾದ ಹಸ್ತಿ ಮಾಲ್ ಸರಸ್ವತ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಾಗಾಗಿ ವಕೀಲ ಹಸ್ತಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಷ್ಣೋಯಿ ಕಡೆಯವನು ಎಂದು ಹೇಳಿಕೊಂಡ ಗೋಲ್ಡಿ ಬ್ರಾರ್ ಹೆಸರಿನ ವ್ಯಕ್ತಿಯೊಬ್ಬ ತಮಗೆ ಜುಲೈ 3 ರಂದು ಕಚೇರಿಯ ಬಾಗಿಲು ಬಳಿ ಬೆದರಿಕೆಯ ಪತ್ರವೊಂದನ್ನು ಇಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ಮಾಲ್ ಉಲ್ಲೇಖಿಸಿದ್ದಾರೆ..
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಹಾಮಂದಿರ್ ಪೊಲೀಸ್ ಠಾಣೆ ಅಧಿಕಾರಿ ಲೇಖ ರಾಜ್ ಸಿಹಾಗ್, ಆ ಪತ್ರವನ್ನು ಪರಿಶೀಲಿಸುತ್ತಿರುವುದಾಗಿ ಹೇಳೀದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಪರ ವಕೀಲರಿಗೆ ಸಿಬ್ಬಂದಿಯೊಬ್ಬರನ್ನು ರಕ್ಷಣೆಗೆ ನಿಯೋಜಿಸಲಾಗಿದೆ ಎಂದೂ ಕೂಡ ತಿಳಿಸಿದ್ದಾರೆ..