ಮಲಯಾಳಂನ ನಟ ಶ್ರೀಜಿತ್ ರವಿ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು ಸದ್ಯ ನಟನನ್ನ ಬಂಧಿಸಲಾಗಿದೆ..
ಅಪ್ರಾಪ್ತ ಬಾಲಕಿಯರ ಎದುರಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.. ಅಲ್ಲದೇ ಶ್ರೀಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ..
ಜುಲೈ 4 ರಂದು ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.. ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ಕಾರಿನಿಂದ ಕೆಳಗಿಳಿದು ಗುಪ್ತಾಂಗವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಆಧರಿಸಿದ ನಂತರ ಪೊಲೀಸರು ರವಿಯನ್ನ ಬಂಧಿಸಿದ್ದಾರೆ.
ಅಂದ್ಹಾಗೆ ಈ ಹಿಂದೆಯೂ ಇದೇ ರೀತಿ ಪ್ರಕರಣ ಶ್ರೀಜಿತ್ ರವಿ ಮೇಲೆ ದಾಖಲಾಗಿತ್ತು. ಪಾಲಕ್ಕಾಡ್ನಲ್ಲಿ 14 ಮಂದಿ ಶಾಲಾ ವಿದ್ಯಾರ್ಥಿನಿಯರ ಗುಂಪಿನ ನಡುವೆ ಸಾರ್ವಜನಿಕವಾಗಿ ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದರು. ಈ ವೇಳೆಯೂ ಶ್ರೀಜಿತ್ ರವಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ರಿಲೀಸ್ ಮಾಡಲಾಗಿತತ್ತು..
ಆದ್ರೂ ಶ್ರೀಜಿತ್ ಹಳೇ ಚಾಳಿಯನ್ನ ಮುಂದುವರೆಸಿ ಮತ್ತೆ ಜೈಲು ಸೇರಿದ್ದಾರೆ.. ಅಂದ್ಹಾಗೆ ಶ್ರೀಜಿತ್ ಹಿರಿಯ ನಟ ಟಿ.ಜಿ. ರವಿ ಅವರ ಮಗ..