ಉಪೇಂದ್ರ ಈಗಾಗಲೇ ತಮಿಳು , ತೆಲುಗು ಸಿನಿಮಾಗಳಲ್ಲೂ ನಟಿಸಿ , ದಕ್ಷಿತ ಭಾರತೀಯ ಸಿನಿಮಾರಂಗದಲಲ್ಲಿ ಚಿರಪರಿಚಿತರಾಗಿದ್ದಾರೆ.. ಕನ್ನಡದ ಸೂಪರ್ ಸ್ಟಾರ್ , ರಿಯಲ್ ಸ್ಟಾರ್ ಉಪೇಂದ್ರ ಈಗ ಕಬ್ಜ ಸಿನಿಮಾ ಮೂಲಕ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ ಈ ಸಿನಿಮಾ ಸುಮಾರು 14 ಭಾಷೆಗಳಿಗೆ ಡಬ್ ಆಗಲಿದೆ.. ಇದೆಲ್ಲದ್ರ ಜೊತೆಗೆ ಉಪ್ಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ..
ಈ ನಡುವೆ ಉಪ್ಪಿ ತೆಲುಗಿನ ಸ್ಟಾರ್ ನಟನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಅದ್ರಲ್ಲೂ ಸಹ ಅವರು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ಅವರ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಟಾಲಲಿವುಡ್ , ಸ್ಯಾಂಡಲ್ ವುಡ್ ಅಂಗಳದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದೆ..
ಉಪೇಂದ್ರ ಅವರು ಸ್ಟಾರ್ ನಾಯಕ ನಟ.. ಅವರು ತಂದೆಯ ಪಾತ್ರವನ್ನ ಒಪ್ತಾರಾ ಅನ್ನೋ ಗೊಂದಲ ಹಲವರಿಗಿದೆ.. ಪ್ರಶ್ನೆಗಳು ಇವೆ.. ಆದ್ರೆ ಆಫರ್ ಸಿಕ್ಕಿದೆ… ಉಪ್ಪಿ ಅವರು ಒಪ್ಪಿದ್ದಾರಾ ,, ಒಪ್ತಾರಾ ಏನೂ ಗೊತ್ತಿಲ್ಲ..