777 Charlie : ಒಟಿಟಿಗೆ ಈ ದಿನ ರಿಲೀಸ್ ಆಗಲಿದೆ ಚಾರ್ಲಿ..!!
KGF 2 ನ ನಂತರ ರಿಲೀಸ್ ಆದ ಕನ್ನಡದ ಪ್ಯಾನ್ ಇಂಡಿಯಾ ಇಂಡಿಯಾ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ದೇಶಾದ್ಯಂತ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.. ಸಿನಿಮಾ ಸೂಪರ್ ಹಿಟ್ ಆಗಿದೆ..
ಸಿನಿಮಾದಲ್ಲಿ ನಾಯಿ ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಬಗ್ಗೆ ತಿಳಿಸಲಾಗಿದ್ದು , ಭಾವನೆಗಳ ಬೆಸೆಯುವ ಸಿನಿಮಾವಾಗಿದೆ.. ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದ ನಂತರ ಇದೀಗ ಚಾರ್ಲಿ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ..
ಸದ್ಯ ಥಿಯೇಟರ್ ಗಳಲ್ಲಿ ಸಿನಿಮಾ 25 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಸಿನಿಮಾ 50 ದಿನಗಳನ್ನ ಪೂರೈಸಿದ ನಂತರ ಒಟಿಟಿಯಲ್ಲಿ ಐದೂ ಭಾಷೆಗಳಲ್ಲೂ ಸ್ಟ್ರೀಮ್ ಆಗಲಿದೆ.. ಅಂದ್ರೆ ಜುಲೈ 29ರಂದು ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ…
ಸಿನಿಮಾ ಒಟಿಟಿಯಲ್ಲೇ ಸುಮಾರು 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂಬ ಸುಳಿವನ್ನ ಇತ್ತೀಚೆಗೆ ಖುದ್ದು ರಕ್ಷಿತ್ ಶೆಟ್ಟಿ ಅವರೇ ನೀಡಿದ್ದರು.. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾದ ಕಲೆಕ್ಷನ್ 100 ಕೋಟಿ ದಾಟಿದೆ..
ಅಂದ್ಹಾಗೆ 777 ಚಾರ್ಲಿ ತೆರೆಕಂಡಾಗಿನಿಂದ ಇಲ್ಲಿಯವರೆಗೂ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಚಾರ್ಲಿ ಸಿನಿಮಾದ ಲಾಭದಲ್ಲಿ 5 % ರಷ್ಟು ಚಾರ್ಲಿಗೆ ಮೀಸಲಿಡಲು ಸಿನಿಮಾ ತಂಡ ಪ್ಲಾನ್ ಮಾಡಿದೆಯಂತೆ. 90 ರಿಂದ 100 ಕೋಟಿವರೆಗೂ ಲಾಭ ಸಿನಿಮಾ ಗಳಿಸಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಅಂಡ್ ಟೀಮ್ ಹೇಳಿದೆ.